ಮಹಾರಾಷ್ಟ್ರದ ಕಾಲ್ ಸೆಂಟರ್ ಹಗರಣ :ಅಮೇರಿಕನ್ನರ ಕೋಟ್ಯಾಂತರ ಹಣ ಲೂಟಿ

Date:

ಕಳೆದ ಒಂದು ವರುಷದಿಂದೀಚೆಗೆ, ಮಹಾರಾಷ್ಟ್ರದ,ಮೀರಾ ರೋಡ್ ನಲ್ಲಿರೋ ಕಾಲ್ ಸೆಂಟರ್ ಸುಮಾರು 500 ಕೋಟಿ ರೂಪಾಯಿಗಳಷ್ಟು ಹಣವನ್ನು ಅಮೇರಿಕನ್ ಪ್ರಜೆಗಳಿಂದ ಲೂಟಿ ಮಾಡಿದೆ ಎಂದು ತಿಳಿದು ಬಂದಿದೆ. ನಿತ್ಯ ಮೂರು ಕಾಲ್ ಸೆಂಟರ್ ಗಳು ಒಟ್ಟಾಗಿ ಸೇರಿ ಸುಮಾರು 1 – 1.5 ಕೋಟಿ ಹಣವನ್ನು ದೋಚುತ್ತಿದ್ದವು. ಇವರಲ್ಲಿ ಈವರೆಗೆ 70 ಜನರನ್ನು ಬಂಧಿಸಲಾಗಿದ್ದಲ್ಲದೆ ಇನ್ನುಳಿದ 630 ಕೆಲಸಗಾರರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ.
ಇಲ್ಲಿಯ ಕೆಲಸಗಾರರನ್ನು ಯಾವುದೇ ಅರ್ಹತೆಯನ್ನು ಕೇಳದೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಆಹ್ವಾನಿಸಲಾಗುತ್ತಿತ್ತು ಹಾಗೂ ಆಯ್ಕೆಯಾದ ವ್ಯಕ್ತಿಗಳಿಗೆ ವಿಶೇಷವಾಗಿ ತರಭೇತಿ ನೀಡಲಾಗುತ್ತಿತ್ತು.
ತರಬೇತಿ ಪಡೆದಿರೋ ಕಾಲ್ ಸೆಂಟರ್ ನ ಕೆಲಸಗಾರರು,ಅಮೇರಿಕಾದಲ್ಲಿರೋ ವ್ಯಕ್ತಿಗಳಿಗೆ,ತಮ್ಮನ್ನು ತಾವು Internal Revenue Service (IRS)(ಭಾರತದ ಆದಾಯ ತೆರಿಗೆ ಅಧಿಕಾರಿಗಳಿಗೆ ಸಮಾನವಾದ ಹುದ್ದೆ)ಅಧಿಕಾರಿಗಳು ಎಂದು ಹೇಳುತ್ತಾ,ಮೊಬೈಲ್ ನ ಕರೆಗಾಗಿ VOIP ಬಳಸಿ,ಅಮೇರಿಕಾದಿಂದ ಬಂದಿರೋ ಕಾಲ್ (+911) ಎಂದು ಸಾಬೀತು ಪಡಿಸುತ್ತಿದ್ದುದಲ್ಲದೆ,ಬ್ಯಾಂಕ್ ಬಗೆಗಿನ ಮಾಹಿತಿ ಪಡೆದು ಖಾತೆಯನ್ನು ಹ್ಯಾಕ್ ಮಾಡಿ ಅವರಿಂದ ಹಣ ದೋಚುತ್ತಿದ್ದರು.ಈ ಕೆಲಸಗಾರರಿಗೆ,ಅಮೇರಿಕನ್ನರಂತೆ ಮಾತಾಡಲು ತರಬೇತಿ ನೀಡಲಾಗುತ್ತಿತ್ತು.ಇದಲ್ಲದೆ ಕರೆಯ ಮೂಲಕ ಅವರಿಗೆ ತೆರಿಗೆ ಪಾವತಿ ಮಾಡದಿದ್ದುದಕ್ಕೆ ದಂಡ ನೀಡಬೇಕೆಂಬ ಬೆದರಿಕೆ ನೀಡುತ್ತಿದ್ದುದಲ್ಲದೆ,ಅವರಿಂದ $10,000-20,000 ಡಿಮಾಂಡ್ ಮಾಡಲಾಗುತ್ತಿತ್ತು.ಹಾಗೂ ಹಣವನ್ನು ಪ್ರೀ ಲೋಡೆಡ್ ಕಾರ್ಡ್ ಮೂಲಕ ಪಾವತಿಸಬೇಕೆಂಬ ಷರತ್ತನ್ನು ನೀಡಲಾಗುತ್ತಿತ್ತು.
ಇವರಲ್ಲಿ ಕೆಲವರು ಅಮೇರಿಕಾದಲ್ಲಿ ನೆಲೆಸಿದ್ದು,ಅವರುಗಳು ಅಲ್ಲಿರೋ ಬ್ಲಾಕ್ ಮಾರ್ಕೆಟ್ ನ ವಿಳಾಸಗಳನ್ನು ಮೀರಾ ರೋಡ್ ನ ಕಾಲ್ ಸೆಂಟರ್ ಗಳಿಗೆ ಕಳುಹಿಸುತ್ತಿದ್ದು,ಈ ವಿಳಾಸಗಳಿಗೆ ಹ್ಯಾಕರ್ಸ್ ಗಳಿಗೆ ಪ್ರತೀ 10,000 ವಿಳಾಸಗಳೀಗೆ 1 ಲಕ್ಷ ದಂತೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಅಮೇರಿಕಾದ ಗ್ಯಾಂಗ್ ಸದಸ್ಯರು ದೋಚಿದ 70% ಹಣವನ್ನು ಕಾಲ್ ಸೆಂಟರ್ ಗಳಿಗೆ ವರ್ಗಾಯಿಸುತ್ತಿದ್ದರೆನ್ನಲಾಗಿದೆ.
ಮುಂಬಯಿಯ ಠಾಣಾದ ಸುಮಾರು ಇನ್ನೂರು ಜನರ ಪೋಲೀಸರ ನೇತೃತ್ವದ ತಂಡವು ಇದನ್ನು ಪತ್ತೆ ಹಚ್ಚಿದೆ.

POPULAR  STORIES :

ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!

ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!

ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..

ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!

ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...