ನಡುರಸ್ತೆಯಲ್ಲಿ ಯುವಕನಿಗೆ ಮನಬಂದಂತೆ ಥಳಿಸಿದ ಗ್ಯಾಂಗ್!
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ಯುವಕನಿಗೆ ಗ್ಯಾಂಗ್ ಒಂದು ಹಿಗ್ಗಮುಗ್ಗ ಥಳಿಸಿರುವ ಘಟನೆ ಜರುಗಿದೆ.
ಹೆಚ್.ಎಲ್.ಎಲ್ ರಸ್ತೆಯ ಯು.ಆರ್. ರಾವ್ ಸೆಟಲೈಟ್ ಸೆಂಟರ್ ಬಳಿ ಯುವಕನ ಮೇಲೆ ಮನಬಂದಂತೆ ಗುಂಪೊಂದು ಹಲ್ಲೆ ಮಾಡ್ತಿರುವ ದೃಶ್ಯ ಸೆರೆಯಾಗಿದೆ. ಹಲ್ಲೆಯ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಕಾಲಿನಿಂದ ಒದ್ದು, ಕೈಯಿಂದ ಗುದ್ದಿ 6 ಯುವಕರು ಅಟ್ಟಹಾಸ ಮೆರೆದಿದ್ದಾರೆ.
ಕಾಲು ಹಿಡದು ಎಳೆದುಕೊಂಡು ಹೋಗಿ, ನೆಲಕ್ಕೆ ಬೀಳಿಸಿ ಒದ್ದು, ಕೈಯಿಂದ ಯುವಕನಿಗೆ ಗುಂಪೊಂದು ಥಳಿಸಿದೆ. ಹಲ್ಲೆ ವಿಡಿಯೋವನ್ನು ಸ್ಥಳೀಯರು ಎಕ್ಸ್ ನಲ್ಲಿ ಶೇರ್ ಮಾಡಿದ್ದಾರೆ.
ಜೀವನಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದ್ದು, ಹಲ್ಲೆ ಬಗ್ಗೆ ಯಾವುದೇ ದೂರು ಬಂದಿಲ್ಲ ಅಂತ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಸದ್ಯ ವಿಡಿಯೋ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.