ರಾತ್ರಿ ನಿದ್ರೆ ಬರ್ತಿಲ್ವಾ!? ನಿರ್ಲಕ್ಷ್ಯ ಬೇಡ, ಹೀಗಾದ್ರೆ ಮಧುಮೇಹ ಅಪಾಯ ಹೆಚ್ಚಂತೆ!

Date:

 

ರಾತ್ರಿ ನಿದ್ರೆ ಬರ್ತಿಲ್ವಾ!? ನಿರ್ಲಕ್ಷ್ಯ ಬೇಡ, ಹೀಗಾದ್ರೆ ಮಧುಮೇಹ ಅಪಾಯ ಹೆಚ್ಚಂತೆ!

ಸಂಪೂರ್ಣ ದೇಹಾರೋಗ್ಯ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಗುಣಮಟ್ಟದ ನಿದ್ರೆಯು ಅತೀ ಅಗತ್ಯ. ಇದರಿಂದ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಅರಿವಿನ ಕ್ರಿಯೆ, ಭಾವನಾತ್ಮಕ ನಿಯಂತ್ರಣ, ಪ್ರತಿರೋಧಕ ವ್ಯವಸ್ಥೆ ಕಾರ್ಯನಿರ್ವಹಿಸಲು ಮತ್ತು ಚಯಾಯಾಪಚಯದ ಸ್ಥಿರತೆಗೆ ಅಗತ್ಯವಾಗಿದೆ. ನಿದ್ರೆಯು ಸರಿಯಾಗಿ ಇಲ್ಲದೆ ಇದ್ದರೆ ಆಗ ಇದರಿಂದ ವಿವಿಧ ಕಾಯಿಲೆಗಳ ಅಪಾಯವು ಹೆಚ್ಚಾಗಬಹುದು.

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ತಡರಾತ್ರಿಯಲ್ಲಿ ಮಲಗುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಅವರ ನಡುವೆ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಬೇಗನೆ ಎದ್ದು ಕಚೇರಿಗೆ ಹೋಗುತ್ತಾರೆ, ಇದರಿಂದಾಗಿ ಅವರ ನಿದ್ರೆ ಅಪೂರ್ಣವಾಗಿರುತ್ತದೆ. ನಿದ್ರೆಯ ಕೊರತೆಯಿಂದಾಗಿ, ಅವರು ಮಧುಮೇಹ ಸೇರಿದಂತೆ ಅನೇಕ ಇತರ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ.

ಈ ಕುರಿತು ವೈದ್ಯರಾಗಿರುವ ಮುಜಮ್ಮಿಲ್ ಮಾತನಾಡಿ, ತಡರಾತ್ರಿಯಲ್ಲಿ ಎಚ್ಚರವಾಗಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳವಾಗುವ ಕುರಿತು ಕೆಲವು ಎಚ್ಚೆರಿಕೆ ನೀಡಿದ್ದಾರೆ. ನಿದ್ರೆಯ ಸಮಯ, ದೇಹದ ಕೊಬ್ಬು ಮತ್ತು ಮಧುಮೇಹದ ಅಪಾಯದ ನಡುವಿನ ಸಂಬಂಧವನ್ನು ಕೇಂದ್ರೀಕರಿಸಿದೆ.

ಇದು ದೀರ್ಘಕಾಲದ ಸ್ಥಿತಿಯಾಗಿದ್ದು, ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ, ಇದು ಅಧಿಕ ರಕ್ತದ ಸಕ್ಕರೆಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಬೊಜ್ಜು, ದೈಹಿಕ ನಿಷ್ಕ್ರಿಯತೆ ಮತ್ತು ಕಳಪೆ ಆಹಾರದಿಂದಲೂ ಆಗಿರಬಹುದು.

ನೆದರ್‌ಲ್ಯಾಂಡ್ಸ್‌ನ ಲೈಡೆನ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಡಾ. ಜೆರೊಯೆನ್ ವ್ಯಾನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಜನರಲ್ಲಿ 3 ವಿಧದ ನಿದ್ರೆಯ ಮಾದರಿಗಳಿವೆ.

ಆರಂಭಿಕ ಕ್ರೋನೋಟೈಪ್:ಬೇಗನೆ ಏಳಲು ಮತ್ತು ಸಮಯಕ್ಕೆ ಮಲಗಲು ಇಷ್ಟಪಡುವ ಜನರು. ಮಧ್ಯಂತರ ಕ್ರೋನೋಟೈಪ್: ಸಮತೋಲಿತ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿರುತ್ತಾರೆ ಅಂದರೆ ಬೇಗವೂ ಮಲಗುವುದಿಲ್ಲ, ತಡವಾಗಿಯೂ ಮಲಗುವುದಿಲ್ಲ. ಲೇಟ್ ಕ್ರೊನೊಟೈಪ್ : ತಡರಾತ್ರಿವರೆಗೆ ಎಚ್ಚರವಾಗಿರುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳಲು ಇಷ್ಟಪಡುತ್ತಾರೆ

ನಿದ್ರೆಯ ನಷ್ಟವು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುವ ಮೂಲಕ ಈ ಪರಿಣಾಮಗಳನ್ನು ತೀವ್ರಗೊಳಿಸುತ್ತದೆ. ಇದು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಅನ್ನು ದುರ್ಬಲಗೊಳಿಸುತ್ತದೆ ಇದು ಮಧುಮೇಹಕ್ಕೆ ಎಡೆ ಮಾಡಿಕೊಡುತ್ತದೆ.

ಸಮತೋಲಿತ ಆಹಾರ ಮತ್ತು ಸ್ಥಿರವಾದ ವ್ಯಾಯಾಮದಿಂದಲೂ ಮಧುಮೇಹ ಬಾರದಂತೆ ನೋಡಿಕೊಳ್ಳಲು ಸಾಧ್ಯ. ಮಧುಮೇಹದ ಅಪಾಯವನ್ನು ನಿಯಂತ್ರಿಸಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ನಿದ್ರೆ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಸಿವೆಂದು ಮಧ್ಯರಾತ್ರಿ ತಿನ್ನುವುದನ್ನು ಕಡಿಮೆ ಮಾಡಿ. ನಿದ್ರೆಯ ವೇಳಾಪಟ್ಟಿಯನ್ನು ಬದಲಾಯಿಸಿ. ಸರಿಯಾದ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...