ಬೆಳ್ಳಂ ಬೆಳಗ್ಗೆ ಅಪಘಾತ: ಲಾರಿ-ಆಟೋ ಡಿಕ್ಕಿಯಾಗಿ ಪ್ಯಾಸೇಂಜರ್ ಸಾವು!

Date:

ಬೆಳ್ಳಂ ಬೆಳಗ್ಗೆ ಅಪಘಾತ: ಲಾರಿ-ಆಟೋ ಡಿಕ್ಕಿಯಾಗಿ ಪ್ಯಾಸೇಂಜರ್ ಸಾವು!

ಬೆಂಗಳೂರು:- ನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಲಾರಿ-ಆಟೋ ಡಿಕ್ಕಿಯಾಗಿ ಪ್ಯಾಸೇಂಜರ್ ಸಾವನ್ನಪ್ಪಿರುವ ಘಟನೆ ವಿಧಾನಸೌಧ ರಸ್ತೆಯ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.

ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್ ನಿಂದ ಬರುತ್ತಿದ್ದ ಆಟೋ
ಮೆಜೆಸ್ಟಿಕ್ ಗೆ ಪ್ಯಾಸೆಂಜರ್ ಡ್ರಾಪ್ ಮಾಡಲು ಹೊರಟಿತ್ತು. ಈ ವೇಳೆ ಕಾಫಿ ಬೋರ್ಡ್ ಸಿಗ್ನಲ್ ಬಳಿ ಸಿಗ್ನಲ್ ಜಂಪ್ ಮಾಡಿ ಆಟೋಗೆ ಲಾರಿ ಡ್ರೈವರ್ ಡಿಕ್ಕಿ ಹೊಡೆದಿದ್ದಾನೆ‌.

ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ನಮ್ಮ ಯಾತ್ರಿ ಆಪ್ ನಲ್ಲಿ ಆಟೋ ಚಾಲಕ ಇಮ್ರಾನ್ ಶಾಲಿನಿ ಅನ್ನೋ ಪ್ಯಾಸೆಂಜರ್ ನ ಪಿಕಪ್ ಮಾಡಿದ್ದ. ವಿಧಾನಸೌಧ ರಸ್ತೆಯಲ್ಲಿ ಬರ್ತಿದ್ದ ವೇಳೆ ಲಾರಿ
ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಲಾರಿ ಚಾಲಕ ಲಾರಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಮೃತದೇಹ ಬೌರಿಂಗ್ ಆಸ್ಪತ್ರೆಗೆ ರವಾನೆಯಾಗಿದ್ದು,
ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಮುಂದುವರಿದ್ದಾರೆ.

Share post:

Subscribe

spot_imgspot_img

Popular

More like this
Related

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ ಮಕ್ಕಳು ಆರೋಗ್ಯವಾಗಿಯೂ ಸದೃಢವಾಗಿಯೂ...