ಖ್ಯಾತ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ಸಾವು: ಕೊಲೆ ಶಂಕೆ!

Date:

ಖ್ಯಾತ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ಸಾವು: ಕೊಲೆ ಶಂಕೆ!

ಮೈಸೂರು:- ಖ್ಯಾತ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ಸಾವನ್ನಪ್ಪಿದ್ದು, ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟುಕೊಂಡಿದೆ.

ಮೈಸೂರಿನ ಆರ್‌ಟಿಒ ವೃತ್ತದ ಬಳಿಯ ಡೆನ್ಮಾರ್​ ಅಪಾರ್ಟ್​ಮೆಂಟ್​​ನ ಮನೆಯಲ್ಲಿ ಇಂದು ಬೆಳಿಗ್ಗೆ ಅವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ವಿದ್ಯಾಧರೆ ಅವರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದರು. ಡಾ. ವಿದ್ಯಾಧರೆ ಅವರ ಪತಿ ಡಾ.ಷಣ್ಮುಖ ಕೆ.ಆರ್.ಆಸ್ಪತ್ರೆಯಲ್ಲಿ ಪ್ರಖ್ಯಾತ ಮೂಳೆ ತಜ್ಞರಾಗಿದ್ದಾರೆ.

ಮಂಡ್ಯದ ಗೌಡಗೆರೆಯ ಡಾ.ವಿದ್ಯಾಧರೆ ಅವರನ್ನು ಡಾ.ಷಣ್ಮುಖ ಅವರು 14 ವರ್ಷದ ಹಿಂದೆ ವಿವಾಹವಾಗಿದ್ದರು. ವೈದ್ಯೆ ವಿದ್ಯಾಧರೆ ಅವರು ರವಿವಾರ ತವರು ಮನೆಯಿಂದ ಮೈಸೂರಿನಲ್ಲಿನ ಗಂಡನ ಮನೆಗೆ ಬಂದಿದ್ದರು. ಆದರೆ, ಡಾ.ವಿದ್ಯಾಧರೆ ಬೆಳಿಗ್ಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ‌ ಡಾ.ಷಣ್ಮುಖ ಮತ್ತು ಡಾ.ಜಿ.ಎಸ್.ವಿದ್ಯಾಧರೆ ನಡುವೆ ವಿರಸ ಇತ್ತು ಎಂಬ ಆರೋಪ ಕೇಳಿಬಂದಿದೆ.

ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಡಾ.ಷಣ್ಮುಖ ಕುಟುಂಬದ ವಿರುದ್ಧ ಡಾ. ವಿದ್ಯಾಧರೆ ತಾಯಿ ಆರೋಪ ಮಾಡಿದ್ದಾರೆ. ಡಾ. ವಿದ್ಯಾಧರೆ ಪೋಷಕರು ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...