ಕ್ಷುಲ್ಲಕ ಕಾರಣಕ್ಕೆ BMTC ಕಂಡಕ್ಟರ್ ಹೊಟ್ಟೆಗೆ ಚಾಕು ಇರಿದ ಯುವಕ!
ಬೆಂಗಳೂರು:- ಕ್ಷುಲ್ಲಕ ಕಾರಣಕ್ಕೆ BMTC ಕಂಡಕ್ಟರ್ ಹೊಟ್ಟೆಗೆ ಯುವಕ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ವೈದೇಹಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ವೋಲ್ವೋ ಬಸ್ ಹತ್ತಿದ್ದಾನೆ. ಬಸ್ ಹತ್ತಿದವನು ಒಳಗಡೆ ಹೋಗದೆ ಡೋರ್ ಸಮೀಪ ನಿಂತಿದ್ದಾನೆ. ಈ ವೇಳೆ ಕಂಡಕ್ಟರ್ ಯೋಗಿಶ್ ಯುವಕನಿಗೆ ಒಳಗಡೆ ಹೋಗುವಂತೆ ಸೂಚಿಸಿದ್ದಾರೆ. ಅಷ್ಟಕ್ಕೇ ಕೋಪಗೊಂಡಿರುವ ಯುವಕ ಕಂಡಕ್ಟರ್ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಎರಡು ಮೂರು ಬಾರಿ ಇರಿದ್ದಾನೆ.
ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಭಯಭೀತರಾಗಿ ಚಿರಾಡಿದಾಗ ಯುವಕ ಇಳಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಬಳಿಕ ಬಸ್‍ನಲ್ಲಿದ್ದ ಪ್ರಯಾಣಿಕರು 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.,
ಕೂಡಲೇ ಘಟನ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಆಗಮಿಸಿ ಕಂಡಕ್ಟರ್ ಯೋಗಿಶ್ ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.