ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಸುದೀಪ್ ಅವರ ತಾಯಿ ಸರೋಜಾ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಜಯನಗರದ ಅಪೋಲೊ ಆಸ್ಪತ್ರೆಗೆ ಸುದೀಪ್ ಅವರ ತಾಯಿಯನ್ನು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 07:04 ಕ್ಕೆ ನಿಧನ ಹೊಂದಿದ್ದು,
ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್ರ ಜೆಪಿ ನಗರ ನಿವಾಸಕ್ಕೆ ತರಲಾಗುವುದು, ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ. ಸುದೀಪ್ ಅವರ ತಾಯಿ ಸರೋಜಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಜೆಪಿ ನಗರದ ನಿವಾಸದತ್ತ ಆಗಮಿಸುತ್ತಿದ್ದಾರೆ.
ನಟ ಸುದೀಪ್ ತಾಯಿ ನಿಧನ!
Date: