ಮಳೆ ಆರ್ಭಟ: ದೇವನಹಳ್ಳಿಯ ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆ ಆರ್ಭಟ ಅಷ್ಟಿಷ್ಟಲ್ಲ. ಅಲ್ಲದೇ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿ ಮಾಡುತ್ತಿದೆ.
ಅದರಂತೆ ಮಳೆ ನೀರಿನ ರಭಸಕ್ಕೆ ಎರಡು ಕಾರುಗಳು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ದೇವನಹಳ್ಳಿ ತಾಲೂಕಿನ ನಾಗರ್ಜುನಾ ಕಾಲೇಜು ಬಳಿ ಜರುಗಿದೆ.
ಸೋಮವಾರ ರಾತ್ರಿ ಕಾಲುವೆ ನೀರಿನಲ್ಲಿ 2 ಕಾರುಗಳು ಕೊಚ್ಚಿಕೊಂಡು ಬಂದಿವೆ. ಕಾಲುವೆಯಲ್ಲಿ ಮಾರುತಿ ಆಸ್ಟರ್ ಕಾರು ಸಂಪೂರ್ಣ ಮುಳುಗಡೆಯಾಗಿದ್ದರೆ, ಮತ್ತೊಂದು ಕಾರು ಕಾಲುವೆ ದಡದಲ್ಲಿ ಕಂಡುಬಂದಿದಿದೆ
ಹುರಳಗುರ್ಕಿ ಗ್ರಾಮದ 6 ಜನರು ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದದಾಗ ಮಳೆ ನೀರಿನ ರಭಸಕ್ಕೆ ಕಾರು ಏಕಾಏಕಿ ಕೊಚ್ಚಿಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ 6 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧಾರಾಕಾರ ಮಳೆಯಿಂದ ರಸ್ತೆ ತುಂಬಾ ಮಳೆ ನೀರು ಹರಿಯುತ್ತಿತ್ತು ಎನ್ನಲಾಗಿದೆ.