ದೇಶೀಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಬ್ಬ ಬೌಲರ್ ಸೇರಿದಂತೆ ಒಟ್ಟು 11 ಮಂದಿ ಆಟಗಾರರು ಆನ್ ಫೀಲ್ಡ್‍ನಲ್ಲಿರೋದು ಸಾಮಾನ್ಯ.. ಆದರೆ ಇದೀಗ ಆ ನಿಯಮ ಬದಲಾವಣೆಯಾಗುವ ಕಾಲ ಒದಗಿ ಬಂದಿದೆ ನೋಡಿ..! ಇದೀಗ 11 ಜನ ಆಟಗಾರರ ಬದಲಿಗೆ 14 ಜನ ಆಟಗಾರರು ಮೈದಾನದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಮಾಡಲು ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.. ಈ ರೀತಿಯ ಸಲಹೆ ಸೂಚನೆ ನೀಡಿದವರು ಬೇರ್ಯಾರೂ ಅಲ್ಲ ಕ್ರಿಕೆಟ್ ದಂತಕಥೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್ ರಮೇಶ್ ತೆಂಡುಲ್ಕರ್ ಅವರು.. ಹೌದು.. ಇವರ ಸಲಹೆ ಮೇರೆಗೆ ಮುಂಬೈನ ಶಾಲಾ ಕ್ರಿಕೆಟ್ ತಂಡವು 11 ಆಟಗಾರರ ಬದಲಾಗಿ 14 ಮಂದಿಯನ್ನು ಕಣಕ್ಕಿಳಲು ನಿರ್ಧರಿಸಿದೆ. ಸ್ಕೂಲ್ ಕ್ರಿಕೆಟ್‍ನಲ್ಲಿ ಆಡುವಂತಹ ಪ್ರತಿಯೊಬ್ಬ ಆಟಗಾರರೂ ವಿದ್ಯಾರ್ಥಿಗಳಾಗಿರುತ್ತಾರೆ. ಶಾಲೆಗಳಲ್ಲಿನ ಕಲಿಕೆಯ ಜೊತೆ ಜೊತೆಗೆ ಕ್ರಿಕೆಟ್ ಮೈದಾನದಲ್ಲಿ ಬಹುದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿರುತ್ತಾರೆ. ಇದೇ ಕಾರಣಕ್ಕೆ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡದೇ ಸದಾ ಮೈದಾನದಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡ್ತಾ ಇರ್ತಾರೆ.. ಆದರೆ ಇಲ್ಲಿ ಎಲ್ಲರೂ ಪ್ರತಿಭಾನ್ವಿತ ಆಟಗಾರರಾದರೂ ಕೂಡ ಕೆಲವರಿಗೆ ಮೈದಾನಕ್ಕಿಳಿಯೋ ಅಥವಾ ಫೀಲ್ಡಿಂಗ್, ಬ್ಯಾಟಿಂಗ್ ಅವಕಾಶ ದೊರಯದೇ ಹೋಗುತ್ತದೆ. ಇವರೆಲ್ಲರಿಗೂ ಇತ್ತ ವಿದ್ಯಾಭ್ಯಾಸವೂ ಇಲ್ಲದೇ ಅತ್ತ ಮೈದಾನದಲ್ಲಿ ಅವಕಾಶಗಳೇ ದೊರೆಯದೇ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ನಾನು ಈ ಸಲಹೆಯನ್ನು ನೀಡಲು ಬಯಸಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೇವಲ 11 ಆಟಗಾರರಿಗೆ ಮಾತ್ರ ಬ್ಯಾಟಿಂಗ್ ಅವಕಾಶಗಳಿದ್ದು ಇನ್ನುಳಿದಂತೆ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳಲ್ಲಿ ಮಾತ್ರ 14 ಜನ ಆಟಗಾರರು ಕಣಕ್ಕಿಳಿಯಬಹುದು ಎಂದು ಹೇಳಿದ್ದಾರೆ.. ಅಲ್ಲದೇ ಸ್ವತಃ ಸಚಿನ್ ಅವರು ಕ್ಲಬ್ ಕ್ರಿಕೇಟ್ ಆಡುವ ಸಂದರ್ಭದಲ್ಲಿ 15 ಜನರಿಗೆ ಅವಕಾಶವನ್ನು ನೀಡಲಾಗಿತ್ತು ಎಂದಿದ್ದಾರೆ. ಇದರಿಂದ ಉತ್ತಮ ಪ್ರತಿಭೆಗಳನ್ನು ಆರಿಸಲು ಸುಲಭವಾಗುತ್ತಿತ್ತು ಎಂದರು. ಇದೀಗ ಸಚಿನ್ ಮನವಿಯನ್ನು ಪುರಸ್ಕರಿಸಿದ ಮುಂಬೈ ಕ್ರಿಕೆಟ್ ಅಸೋಸಿಯೇಶನ್ 14 ಆಟಗಾರರ್ನು ತಂಡದಲ್ಲಿ ಆಡಿಸಲು ನಿರ್ಧರಿಸಿದೆ.
POPULAR STORIES :
ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!
ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!
ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್..!
60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!
ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!
ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!