ದರ್ಶನ್ ಗೆ ಸಿಕ್ತು ಜಾಮೀನು: ವಿಜಯಲಕ್ಷ್ಮಿ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದು ಯಾರಿಗೆ!?
ನಟ ದರ್ಶನ್ ಗೆ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ದರ್ಶನ್ ಬಂಧನ ಆಗುತ್ತಿರುವ ವಿಚಾರ ಕೇಳುತ್ತಿದ್ದಂತೆ ವಿಜಯಲಕ್ಷ್ಮೀ ಶಾಕ್ಗೆ ಒಳಗಾದರು. ಆ ಬಳಿಕ ಅವರು ಇನ್ಸ್ಟಾಗ್ರಾಮ್ನ ಡಿ-ಆ್ಯಕ್ಟಿವೇಟ್ ಕೂಡ ಮಾಡಿದ್ದರು. ‘ನನ್ನ ಮಗ ನಾನು ಅಷ್ಟೇ ಸಾಕು’ ಎಂದು ಅವರು ಹೇಳಿದ್ದಾಗಿ ವರದಿ ಆಗಿತ್ತು. ಆ ಬಳಿಕ ಅವರು ಇನ್ಸ್ಟಾಗ್ರಾಮ್ಗೆ ಮರಳಿದ್ದರು. ಅಲ್ಲಿಂದಲೇ ದರ್ಶನ್ ಅಭಿಮಾನಿಗಳ ಬಳಿ ಅವರು ಹಲವು ರೀತಿಯ ಮನವಿಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದರು.
ದರ್ಶನ್ಗೆ ಆರು ವಾರಗಳ ಷರತ್ತುಬದ್ಧ ಜಾಮೀನು ಸಿಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಕಾಮಕ್ಯ ದೇವಸ್ಥಾನದ ಫೋಟೋ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇವಿ ಆಶೀರ್ವಾದಿಂದ ಬೇಲ್ ಸಿಕ್ಕಿದೆ ಎಂದು ವಿಜಯಲಕ್ಷ್ಮೀ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.
ದರ್ಶನ್ ಅವರು ಇಂದೇ ಬಿಡುಗಡೆ ಆಗೋ ಸಾಧ್ಯತೆ ಇದೆ. ಹಾಗದಲ್ಲಿ ದರ್ಶನ್ ಅವರನ್ನು ಹೊರಕ್ಕೆ ಬಂದ ಬಳಿಕ ಅವರನ್ನು ಕರೆದುಕೊಂಡು ಬರಲು ವಿಜಯಲಕ್ಷ್ಮಿ ತೆರಳುವ ಸಾಧ್ಯತೆ ಇರುತ್ತದೆ. ದರ್ಶನ್ ಅವರು ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಾದ ಬಳಿಕ ಅವರು ವೈದ್ಯಕೀಯ ಚಿಕಿತ್ಸೆ ಪಡೆಯೋ ಸಾಧ್ಯತೆ ಇದೆ