ಅಂಬರೀಶ್ ಮನೆಯಲ್ಲಿ ಮನೆಮಾಡಿದ ಸಂಭ್ರಮ: ಗಂಡು ಮಗುವಿಗೆ ಜನ್ಮ ನೀಡಿದ ಅಭಿಷೇಕ್ ಪತ್ನಿ ಅವಿವಾ
ಬೆಂಗಳೂರು: ಅಭಿಷೇಕ್ ಅಂಬರೀಶ್ ಮನೆಯಲ್ಲಿ ಇಂದು ಸಡಗರ ಮನೆ ಮಾಡಿದೆ. ಅಭಿಷೇಕ್ ಪತ್ನಿ ಅವಿವಾ ಇಂದು 8.30ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು. ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಅಭಿಷೇಕ್ ಮತ್ತು ಅವಿವಾರ ಮದುವೆಯು ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್. ಇದೀಗ ಎರಡೂ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ.