ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ ಆರೋಪ: ನಟ ತಾಂಡವ ರಾಮ್ ಅರೆಸ್ಟ್

Date:

ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ ಆರೋಪ: ನಟ ತಾಂಡವ ರಾಮ್ ಅರೆಸ್ಟ್

ಬೆಂಗಳೂರು: ಒಂದು ಕಥೆ ಹೇಳ್ಲಾ, ಜೋಡಿಹಕ್ಕಿ ಸೀರಿಯಲ್, ಭೂಮಿಗೆ ಬಂದ ಭಗವಂತ ಸೀರಿಯಲ್‌ ನಲ್ಲಿ ನಟಿಸಿದ್ದ ನಟ ತಾಂಡವ ರಾಮ್ʼರನ್ನು ಅರೆಸ್ಟ್‌ ಮಾಡಲಾಗಿದೆ. ಮುಗಿಲ್ ಪೇಟೆ ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ಮೇಲೆ ನಟ ತಾಂಡವ್ ರಾಮ್ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಫ ಕೇಳಿ ಬಂದಿದೆ. ನಿರ್ದೇಶನ ಮಾಡುತ್ತಿದ್ದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಭರತ್, ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ತಾಂಡವ್ ರಾಮ್ ನಟಿಸುತ್ತಿದ್ದರು. ಆದರೆ ಆ ಸಿನಿಮಾವನ್ನು ಭರತ್ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ತಾಂಡವ್ ರಾಮ್, ನಿರ್ದೇಶಕ ಭರತ್ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಒಂದು ಸುತ್ತು ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು: ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು:...

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...