ನಿಖಿಲ್ ಸೋಲಿನಿಂದ ಮನನೊಂದು ವಿಷ ಸೇವಿಸಿದ ಅಭಿಮಾನಿ!
ಮಂಡ್ಯ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿಗೆ ಸತತ 3ನೇ ಬಾರಿಯೂ ಸೋಲಾಗಿದೆ. ಇದರಿಂದ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಚನ್ನಪಟ್ಟಣದ ಕೂಡ್ಲೂರು ಬಳಿಯ ಶ್ರೀರಾಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದು, ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದಿಂದ ನೊಂದ ಮಂಜುನಾಥ್, ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ನಾನು ನಿಖಿಲ್ ಅಭಿಮಾನಿ. ನನ್ನ ಸಾವಿಗೆ ನಾನೇ ಕಾರಣ. ಜೈ ಜೆಡಿಎಸ್ ಎಂದು ಪತ್ರ ಬರೆದಿಟ್ಟಿದ್ದಾನೆ. ಬಳಿಕ ವಿಷ ಸೇವಿಸಿದ್ದಾನೆ. ಈತನನ್ನು ಕೂಡಲೇ ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.






