ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಇಂದಿನಿಂದ ಚಾಲನೆ! ಎಲ್ಲಿ ನೋಡಿದರೂ ಜನವೋ ಜನ!
ಬೆಂಗಳೂರು:- ಕಡಲೆ ಕಾಯಿ ಪರಿಷೆ ಅಂದ್ರೆ ಅದು ಬಸವನಗುಡಿ ಕಡಲೆ ಕಾಯಿ ಪರಿಷೆ.. ಬಸವನಗುಡಿಯಲ್ಲಿ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದ್ದು, ಎಲ್ಲಿ ನೋಡಿದರೂ ಜನಜಂಗುಳಿ ತುಂಬಿ ತುಳುಕುತ್ತಿದೆ.
ಪರಿಷೆಗೆ ಲಕ್ಷಾಂತರ ಮಂದಿ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಕಡಲೆಕಾಯಿ ಪರಿಷೆ ಇತಿಹಾಸದಲ್ಲಿ ಇದೇ ಮೊದಲನೆಯ ಬಾರಿಗೆ ಹಾಕಿರುವ ಸುಮಾರು 4-5 ಸಾವಿರ ಅಂಗಡಿಗಳಿಗೆ ಶುಲ್ಕ ರಹಿತವಾಗಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಮೊದಲನೆಯ ಬಾರಿಗೆ ರಾಮಕೃಷ್ಣ ಆಶ್ರಮ ವೃತ್ತ ಗಣೇಶ ಭವನ್ ವೃತ ಹಾಗೂ ಸುತ್ತಮುತ್ತಲಿನ ರಸ್ತೆಗಳೆಲ್ಲ ವಿಜೃಂಭಣೆಯ ದೀಪಾಲಂಕಾರ ಮಾಡಲಾಗಿದೆ. ಇಂದು ಸಂಜೆ 6:15ಕ್ಕೆ ಕೆಂಪಾಬುದಿ ಕೆರೆಯಲ್ಲಿ ವಿಶೇಷ ತೆಪ್ಪೋತ್ಸವ ನಡೆಯಲಿದೆ. ಬಸವನ ದರ್ಶನಕ್ಕೆ ಬರುವ ಸಾರ್ವಜನಿಕರಿಗೆ ವಿಶೇಷ ಸಾಲಿನ ದರ್ಶನ ವ್ಯವಸ್ಥೆ ಹಾಗೂ ಹಿರಿಯರಿಗೆ ವಿಶೇಷ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಕಡಲೆಕಾಯಿ ಪರಿಷೆಗೆ ವ್ಯಾಪಾರಕ್ಕಾಗಿ ಚಿಂತಾಮಣಿ, ಮಾಗಡಿ, ಕೋಲಾರ, ತುಮಕೂರು, ಆಂಧ್ರ, ತಮಿಳುನಾಡು, ರಾಮನಗರ, ಚಿತ್ರದುರ್ಗ ಸೇರಿದಂತೆ ಹಲವೆಡೆಯಿಂದ 3 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಬಂದಿದ್ದಾರೆ. ಇನ್ನೂ ಈ ವರ್ಷ ಹೆಚ್ಚು ಮಳೆಯಾಗದ ಕಾರಣ ಕಡೆಕಾಯಿ ಬೆಲೆ ಸ್ವಲ್ಪ ಏರಿಕೆ ಕಂಡಿದ್ದು, ಕೆ.ಜಿಗೆ 50-70 ರೂ. ಇದೆ. ಪರಿಷೆಗೆ ಲಕ್ಷಾಂತರ ಮಂದಿ ಸಾಕ್ಷಿಯಾಗುವ ನಿರೀಕ್ಷೆಯಿದೆ.