ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ದೇವನಹಳ್ಳಿ: ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಹಾಗೂ ಅರದೇಶನಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಪಘಾತ ದಲ್ಲಿ ಉಗನವಾಡಿಯ ವೆಂಕಟೇಶ್ (50). ಹಾಗೂ ಕಸವನಹಳ್ಳಿ ಯ ಮಹೇಶ್ (30) ಮೃತ ಪಟ್ಟ ದುರ್ದೈವಿಗಳು.. ಘಟನೆ ಪರಿಣಾಮ ಬೈಕ್ ನಜ್ಜು ಗುಜ್ಜಾಗಿದ್ದು, ಇನ್ನೂ ಅಪಘಾತದಲ್ಲಿ ಮೃತ ಪಟ್ಟ ದೇಹಗಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ನೆರಗನಹಳ್ಳಿ ಬಳಿ ನಡೆದ ಘಟನೆಯಾಗಿದೆ.