ಮಾನವ ಕುಲವೇ ತಲೆತಗ್ಗಿಸುವ ಸುದ್ದಿ! ಶಿಶುವೊಂದನ್ನು ಟಾಯ್ಲೆಟ್​ಗೆ ಹಾಕಿ ಫ್ಲಶ್, ದೂರು ದಾಖಲು!

Date:

ಮಾನವ ಕುಲವೇ ತಲೆತಗ್ಗಿಸುವ ಸುದ್ದಿ! ಶಿಶುವೊಂದನ್ನು ಟಾಯ್ಲೆಟ್​ಗೆ ಹಾಕಿ ಫ್ಲಶ್, ದೂರು ದಾಖಲು!

ರಾಮನಗರ:- ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ಜರುಗಿದೆ.

ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ 10:30 ರ‌ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್​ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್​​ನಲ್ಲಿ‌ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ‌ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಕ್ಲೀನ್ ಮಾಡಿದ್ದಾರೆ. ಆಗ, ಏನೋ‌ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.

ಟಾಯ್ಲೆಟ್ ಶುಚಿಗೊಳಿಸುವ, ಬ್ಲಾಕ್ ನಿರ್ಮೂಲನೆಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ ಶ್ಲಾಘನೆ

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ...

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ ದರದಲ್ಲಿ ರಿಲೀಫ್

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ...

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ ನವದೆಹಲಿ:...

ಕೇಂದ್ರ ಬಜೆಟ್ 2026–27: 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ – ಬೆಂಗಳೂರಿಗೆ ಬುಲೆಟ್ ರೈಲು

ಕೇಂದ್ರ ಬಜೆಟ್ 2026–27: 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ –...