ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ: ಜಿ.ಟಿ.ದೇವೇಗೌಡ
ಮೈಸೂರು: ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನನ್ನನ್ನು ಕಳ್ಳ ಅಂದರೂ ಸಹ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದೇ ಕೊನೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಬಂಧನದ ಸೇಡನ್ನು ಯಾರು ಇಟ್ಟುಕೊಂಡಿಲ್ಲ. ನನ್ನ ತಂದೆ, ನಾನು ಮತ್ತು ನನ್ನ ಮಗ ಯಾವತ್ತೂ ಜೈಲಿಗೆ ಹೋಗುವ ಸ್ಥಿತಿ ಬಂದಿಲ್ಲ. ಮುಂದೆಯೂ ಅಂತಾ ಸ್ಥಿತಿ ಬರುವುದು ಬೇಡ ಅಂತಾ ಪ್ರಾರ್ಥಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಪ್ಪಿಸಿದ್ದು ಹೆಚ್.ಡಿ.ರೇವಣ್ಣ. 20 ರಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು.
ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಕೂಡ ಯಾಚಿಸಿದ್ದಾರೆ. ಅವರು ಡಿಸಿಎಂ ಆಗಬೇಕಿತ್ತು. ಅದು ಆಗುವುದಿಲ್ಲ ಅನ್ನೋ ಕಾರಣಕ್ಕೆ ತಪ್ಪಿಸಿದರು. ದೊಡ್ಡ ಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು ಎಂದರು.