ಮುಡಾ ಹಗರಣ: ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ – ಬಿ.ಆರ್.ಪಾಟೀಲ್
ಹುಬ್ಬಳ್ಳಿ: ಮುಡಾ ಹಗರಣ ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ ಎಂದು ಎಂ ಆಪ್ತ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೂರು ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ. ಎಲ್ಲಾ ಹಗರಣಗಳು ಕಲ್ಪನೆ. ಮುಡಾ ಹಗರಣ ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ ಎಂದರು.
ಇನ್ನೂ ಈ ಹಗರಣಗಳು ಬರೀ ನಮ್ಮ ಕಾಲದಲ್ಲಿ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲಿ ಆಗಿವೆ. ವಕ್ಫ್ ಬೋರ್ಡ್ ವಿಚಾರವಾಗಿ ಬಿಜೆಪಿ ಸಹ ನೋಟಿಸ್ ನೀಡಿತ್ತು. ಇದು ದುರುದ್ದೇಶದಿಂದ ನಮ್ಮ ಸರ್ಕಾರಕ್ಕೆ ಗೂಬೆ ಕೂರಿಸಬೇಕು, ಕೆಟ್ಟ ಹೆಸರು ತರಬೇಕು ಅಂತಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.