ಐಜಿಪಿ ವಿಥ್ ಔಟ್ ಡ್ರೆಸ್ ಕೈಯಲ್ಲಿ ಲಾಠಿ ಹಿಡಿದಿದ್ದು ಮಹಾ ಅಪರಾಧ: ಶಾಸಕ ಯತ್ನಾಳ್
ಬೆಳಗಾವಿ: ಐಜಿಪಿ ವಿಥ್ ಔಟ್ ಡ್ರೆಸ್ ಕೈಯಲ್ಲಿ ಲಾಠಿ ಹಿಡಿದಿದ್ದು ಮಹಾ ಅಪರಾಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋರಾಟವನ್ನು ಬಗ್ಗು ಬಡಿಯಬೇಕು ಎಂದು ಸರ್ಕಾರ ಮೊದಲೇ ಪ್ಲಾನ್ ಮಾಡಿತ್ತು. ಪೊಲೀಸರ ಮೂಲಕ ಹೋರಾಟಗಾರರ ಮೇಲೆ ಸರ್ಕಾರ ಧಮ್ಕಿ ಹಾಕಿಸಿದ್ದಾರೆ.
ನಮ್ಮ ಹೋರಾಟ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ನಾವು ಯಾವುದೇ ಗಲಾಟೆ, ಕಲ್ಲು ತೂರಾಟ ಮಾಡೋದಾಗಲಿ, ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಐಜಿಪಿ ವಿಥ್ ಔಟ್ ಡ್ರೆಸ್ ಕೈಯಲ್ಲಿ ಲಾಠಿ ಹಿಡಿದಿದ್ದು ಮಹಾ ಅಪರಾಧ. ಡ್ರೆಸ್ ಹಾಕದೆ ಇರೋನು ಅಧಿಕಾರಿನೇ ಅಲ್ಲ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.