ಪ್ರತಿಭಟನೆಕಾರರ ಮೇಲೆ ಲಾಠಿಚಾರ್ಜ್ ಹಿಂದೆ ಸರ್ಕಾರದ ದುರುದ್ದೇಶವಿರಲಿಲ್ಲ: ಸಚಿವ ಜಿ ಪರಮೇಶ್ವರ್
ಬೆಳಗಾವಿ: ಪ್ರತಿಭಟನೆಕಾರರ ಮೇಲೆ ಲಾಠಿಚಾರ್ಜ್ ಹಿಂದೆ ಸರ್ಕಾರದ ದುರುದ್ದೇಶವಿರಲಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನೆಕಾರರ ಮೇಲೆ ಲಘು ಪ್ರಹಾರ ನಡೆದ ಹಿಂದೆ ಸರ್ಕಾರದ ಯಾವುದೇ ದುರುದ್ದೇಶವಿರಲಿಲ್ಲ,
ಜಿಲ್ಲಾಡಳಿತ ಜಾರಿಗೊಳಿಸಿದ್ದ ಪ್ರತಿಬಂಧಕಾಜ್ಞೆ ಮತ್ತು ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲಂಘಿಸುವುದಕ್ಕೆ ಮುಂದಾದಾಗ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅನಿವಾರ್ಯವಾಗಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.
ಇನ್ನೂ ಕ್ಟರ್ ಗಳನ್ನು ಸುವರ್ಣ ಸೌಧದ ಆವರಣಕ್ಕೆ ಒಯ್ಯಕೂಡದು ಎಂದು ನ್ಯಾಯಾಲಯ ಹೇಳಿದ್ದರೂ ಸ್ವಾಮೀಜಿಯವರ ಕರೆಯ ಮೇರೆಗೆ ಟ್ರ್ಯಾಕ್ಟರ್ ಗಳನ್ನು ಮುನ್ನುಗ್ಗಿಸುವ ಪ್ರಯತ್ನವನ್ನು ಪ್ರತಿಭಟನೆಕಾರರು ಮಾಡಿದರು ಎಂದು ತಿಳಿಸಿದ್ದಾರೆ.