ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ?: ಅರವಿಂದ ಬೆಲ್ಲದ ಪ್ರಶ್ನೆ

Date:

ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ?: ಅರವಿಂದ ಬೆಲ್ಲದ ಪ್ರಶ್ನೆ

ಹುಬ್ಬಳ್ಳಿ: ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ? ಎಂದು ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರನ್ನು ಓಲೈಸುವುದನ್ನು ಬಿಟ್ಟರೆ ಏನು ಇಲ್ಲ. ಹಿಂದೂ ಸಮಾಜ ಅವರಿಗೆ ಮತ ಹಾಕಿದೆ ಎನ್ನುವ ಕಲ್ಪನೆ ಕೂಡ ಅವರಿಗಿಲ್ಲ. ಕೇವಲ ಮುಸ್ಲಿಂ ಸಮಾಜದ ಬಗ್ಗೆ ಕಾಳಜಿ ಇದೆ.
ಮುಸ್ಲಿಂ ಸಮಾಜಕ್ಕೂ ಮಾಡಲಿ, ನಾವು ಬೇಡ ಅನ್ನಲ್ಲ, ಆದರೆ ಬೇರೆಯವರೂ ಇದಾರಲ್ಲ. ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಶೇ. 36 ಒಬಿಸಿ ಮೀಸಲಾತಿ ಇದೆ. ಅದರಲ್ಲಿ ಶೇ. 23 ಮುಸ್ಲಿಂ ಸಮಾಜಕ್ಕಿದೆ. ಧರ್ಮ ಆಧಾರಿತ ಮೀಸಲಾತಿ ಇಲ್ಲ ಅಂತ ಅಂಬೇಡ್ಕರ್ ಸಂವಿಧಾನ ಹೇಳಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಆಧಾರದ ಮೇಲೆ ಮೀಸಲಾತಿ ಇದೆ. ಸಂಪೂರ್ಣ ಮುಸ್ಲಿಂ ಅಂತ ನಾಲ್ಕು ಪರ್ಸೆಂಟ್ ಕೆಟೆಗೆರಿ ಮಾಡಿದ್ದಾರೆ. ಕೆಟೆಗೆರಿ 2ಎ ದಲ್ಲಿ ಶೇ. 18 ರಷ್ಟು ಮುಸ್ಲಿಂಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು? ನಮ್ಮ...

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...