ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಇಂದು ರಿಲೀಸ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಅವರಿಗೆ ಕಡೆಗೂ ಬೇಲ್ ಸಿಕ್ಕಿದೆ. 180ಕ್ಕೂ ಅಧಿಕ ದಿನ ದಿನಗಳ ಕಾಲ ಪರಪ್ಪನ ಅಗ್ರಗಾರ ಜೈಲಿನಲ್ಲಿ ಕಾಲ ಕಳೆದಿರುವ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. ಈ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ಜಾಮೀನು ಪಡೆಯಲು ಪವಿತ್ರಾ ಗೌಡ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಗಂಭೀರ ಪ್ರಕರಣ ಆದ್ದರಿಂದ ಅವರಿಗೆ ಜಾಮೀನು ವಿಳಂಬ ಆಗಿತ್ತು. ಬೇಲ್ ಸಿಕ್ಕಿರುವುದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ ಅವರಿಗೆ ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೈಕೋರ್ಟ್‌ನಿಂದ ಬಿಡುಗಡೆ ಆದೇಶ ಪ್ರತಿ ಪರಪ್ಪನ ಅಗ್ರಹಾರ ಜೈಲು ತಲುಪಿದ ನಂತರ ರಿಲೀಸ್ ಆಗಲಿದ್ದಾರೆ. ಹೈಕೋರ್ಟ್ ಜಾಮೀನು ಆದೇಶದ ಸರ್ಟಿಫೈಡ್ ಕಾಪಿ ಸಿಕ್ಕ ಬಳಿಕ ಸರ್ಟಿಫೈಡ್ ಕಾಪಿಯನ್ನು ಹಾಗೂ ಶ್ಯೂರಿಟಿಯನ್ನು 57ನೇ ಸೆಷನ್ಸ್ ಕೋರ್ಟ್ ಗೆ ಸಲ್ಲಿಕೆ ಮಾಡಲಾಗುತ್ತದೆ.
ಆ ಬಳಿಕ ಪವಿತ್ರಾ ಪರ ವಕೀಲರ ಕೈಗೆ ಬಿಡುಗಡೆ ಆದೇಶ ಪ್ರತಿ ಸಿಗಲಿದೆ. ಇಂದು ಪವಿತ್ರಾ ಗೌಡ ಜೊತೆಗೆ ಪ್ರಕರಣದ ಇನ್ನುಳಿದ ಆರೋಪಿಗಳಾದ ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್, ಪ್ರದೂಷ್ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ.