ಸಿಎಂ ಕ್ಷಮೆ ಕೇಳಬೇಕು, ಲಾಠಿಚಾರ್ಜ್ ಮಾಡಿದವರ ಸಸ್ಪೆಂಡ್ ಆಗಬೇಕು: ಬಸವ ಜಯಮೃತ್ಯುಂಜಯ ಶ್ರೀಗಳು
ಬೆಳಗಾವಿ : ಸಿಎಂ ಕ್ಷಮೆ ಕೇಳಬೇಕು, ಲಾಠಿಚಾರ್ಜ್ ಮಾಡಿದವರ ಸಸ್ಪೆಂಡ್ ಆಗಬೇಕು ಎಂದು ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ಪಂಚಮಸಾಲಿ ಸಮುದಾಯದವರ ಮೇಲಿನ ಲಾಠಿಚಾರ್ಜ್ ವಿಚಾರ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪವಾಗಿದೆ. ಕಲಾಪದ ಆರಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ.
ಲಾಠಿಚಾರ್ಜ್ ಮಾಡಿರುವ ಸರ್ಕಾರ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಹೋರಾಟಕ್ಕೆ ತಡೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು, ತಡೆಯುವುದು ಅವರ ಹವ್ಯಾಸ. ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ. ಸಿಎಂ ಕ್ಷಮೆ ಕೇಳಬೇಕು, ಲಾಠಿಚಾರ್ಜ್ ಮಾಡಿದವರ ಸಸ್ಪೆಂಡ್ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಕೇಳುವುದು ಸಂವಿಧಾನಕ್ಕೆ ವಿರುದ್ಧ ಎಂಬ ಹೇಳಿಕೆಯನ್ನ ವಾಪಸ್ ಪಡೆದು, ಕಡತದಿಂದ ಅದನ್ನು ನಿರ್ಮೂಲನೆ ಮಾಡಬೇಕೆಂದು ಆಗ್ರಹಿಸಿ ಇವತ್ತಿನಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದೆ ಎಂದರು.