ರೇಣುಕಾಸ್ವಾಮಿ ಕೇಸ್: ಭಗವದ್ಗೀತೆ ಪುಸ್ತಕ ಹಿಡಿದು ಜೈಲಿನಿಂದ ಹೊರ ಬಂದ ಅನುಕುಮಾರ್
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೊತೆ ಅವರ ಸಹಚರರು ಕೂಡ ಅರೆಸ್ಟ್ ಆಗಿದ್ದರು. ಈ ಪೈಕಿ ಲಕ್ಷ್ಮಣ್, ನಾಗರಾಜ್, ಅನುಕುಮಾರ್, ಜಗದೀಶ್, ಪ್ರದೂಷ್ ಜಾಮೀನು ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಅನುಕುಮಾರ್ಗೆ ಬೇಲ್ ಶ್ಯೂರಿಟಿ ತಡವಾದ ಹಿನ್ನೆಲೆ ಇಂದು ಬಿಡುಗಡೆಯಾಗಿದ್ದಾರೆ. ಇನ್ನು ಕೊಲೆ ಆರೋಪಿ ಅನುಕುಮಾರ್ ಜೈಲಿನಿಂದ ಹೊರಬರುವಾಗ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಆಚೆಗೆ ಬಂದಿದ್ದಾನೆ.
ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕಾರಾಗೃಹಕ್ಕೆ ವರ್ಗಾವಣೆಯಾಗುವಾಗ ನಟ ದರ್ಶನ್ ನೀಡಿದ್ದ ಭಗವದ್ಗೀತೆ ಪುಸ್ತಕದೊಂದಿಗೆ ಕಾಲ ಕಳೆದಿದ್ದ ಅನುಕುಮಾರ್, ಅದೇ ಪುಸ್ತಕ ಹಿಡಿದು ಹೊರಬಂದಿದ್ದು ಬಳಿಕ ತನ್ನ ಸಹೋದರನೊಂದಿಗೆ ತೆರಳಿದ್ದಾನೆ.