ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು: ಸ್ನೇಹಮಹಿ ಕೃಷ್ಣ ಹೇಳಿದ್ದೇನು ಗೊತ್ತಾ..?

Date:

ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು: ಸ್ನೇಹಮಹಿ ಕೃಷ್ಣ ಹೇಳಿದ್ದೇನು ಗೊತ್ತಾ..?

ಮೈಸೂರು: ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡಲು ನಗರ ಪಾಲಿಕೆ ಮುಂದಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರೆ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನಗರಪಾಲಿಕೆ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದು, ಕೂಡಲೇ ರಾಜಕುಮಾರಿ ರಸ್ತೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದ್ದಾರೆ.
ಮೈಸೂರು ನಗರ ಪಾಲಿಕೆ ವತಿಯಿಂದ ಪ್ರಿನ್ಸೆಸ್ ರೋಡ್ ನಾಮಫಲಕ ಅಳವಡಿಸಿ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಹಲವು ದಾಖಲೆಗಳನ್ನೂ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಿನ್ಸೆಸ್ ರಸ್ತೆ ಹೆಸರಿನ ದಾಖಲೆಗಳನ್ನೂ ನೀಡಿದ್ದಾರೆ. ಜತೆಗೆ ರೈಲ್ವೆ ಇಲಾಖೆಯಲ್ಲಿ ಉಲ್ಲೇಖವಿರುವ ಬಗ್ಗೆಯೂ ದಾಖಲೆ ನೀಡಿದ್ದಾರೆ. ಮಾಜಿ ಸಂಸದ ಪ್ರತಾಪಸಿಂಹ ಸಭೆ ನಡಾವಳಿಯಲ್ಲೂ ‘ಪ್ರಿನ್ಸೆಸ್ ರಸ್ತೆ’ ಎಂದು ನಮೂದಾಗಿರುವ ದಾಖಲೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹೆಸರು ರಸ್ತೆಗೆ ಇರುವ ಪ್ರಸ್ತಾವಕ್ಕೆ ಬೆಂಬಲ ನೀಡದಂತೆ ಪ್ರತಾಪಸಿಂಹ ಅವರಿಗೂ ಮನವಿ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...