ವೃತ್ತ ನಿರೀಕ್ಷಕ ಅಧಿಕಾರಿಯೊಬ್ಬರು ಪೊಲೀಸ್ ಠಾಣೆಯಲ್ಲೇ ತನ್ನ ರಿವಾಲ್ವಾರ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಜಿಲ್ಲೆಯ ಮಾಲೂರು ಪೋಲೀಸ್ ಠಾಣೆಯಲ್ಲಿ ಈ ಘಟನೆ ಸಂಭವಿಸಿದ್ದು ವೃತ್ತ ನಿರೀಕ್ಷಕರಾದ ರಾಘವೇಂದ್ರ ಅವರು ನಿನ್ನೆ ರೌಂಡ್ಸ್‍ಗೆ ಹೋಗಿ ಬಂದ ನಂತರ ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿ ಸಾವಿಗೆ ಶರಣಾಗಿದ್ದಾರೆ.
ಇದೀಗ ರಾಘವೇಂದ್ರ ಅವರು ಏಕಾಏಕಿಯಾಗಿ ಈ ನಿರ್ಧಾರ ತೆಗೆದುಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾವಿನ ಕುರಿತು ಯಾವುದೇ ನಿರ್ದಿಷ್ಠವಾದ ಕಾರಣಗಳು ಲಭ್ಯವಾಗದೇ ಹೋದರೂ ಮರಳು ಮಾಫಿಯಾ ಹಾಗೂ ಮೇಲಾಧಿಕಾರಿಗಳ ಒತ್ತಡ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಘವೇಂದ್ರ ಅವರು ಈ ಹಿಂದೆ ಬೆಂಗಳೂರು ಹೊರ ವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. 2014 ರಲ್ಲಿ ಇವರ ಮೇಲೆ ಲೋಕಾಯುಕ್ತ ದಾಳಿಯೂ ಕೂಡ ಆಗಿತ್ತು ಈ ವೇಳೆ ಅವರು ಒಂದು ವಾರಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸಿದ್ದರು. ನಂತರ ಲೋಕಾಯುಕ್ತ ಪ್ರಕರಣದಲ್ಲಿ ರಾಘವೇಂದ್ರ ಅವರನ್ನು ನಿರ್ದೂಷಿ ಎಂದು ಆದೇಶ ಬಂದ ನಂತರ ಅವರು ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು.
Like us on Facebook The New India Times
POPULAR STORIES :
ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!