ಶಿಕಾರಿಪುರದಿಂದ ಒಬ್ಬಂಟಿಯಾಗಿ ಪ್ರವಾಸ ಶುರುಮಾಡುತ್ತೇನೆ: ವಿಜಯೇಂದ್ರಗೆ ರಮೇಶ್ ಜಾರಕಿಹೊಳಿ ಸವಾಲು
ಬೆಳಗಾವಿ: ಶಿಕಾರಿಪುರದಿಂದ ಒಬ್ಬಂಟಿಯಾಗಿ ಪ್ರವಾಸ ಶುರುಮಾಡುತ್ತೇನೆ ಎಂದು ವಿಜಯೇಂದ್ರಗೆ ಶಾಸಕ ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ. ಯಡಿಯೂರಪ್ಪಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆನಗರದಲ್ಲಿ ಮಾತನಾಡಿದ ಅವರು, ಇಂದಿಗೂ ಯಡಿಯೂರಪ್ಪನವರು ನಮ್ಮ ನಾಯಕ. ನಾನು ಅವರ ಮೇಲೆ ಅಗೌರವದಿಂದ ಮಾತನಾಡಿಲ್ಲ.
ಆದರೆ ನೀನು ಸುಳ್ಳು ಹೇಳುವುದನ್ನು ಬಿಡು. ನಾನು ಶಿಕಾರಿಪುರಕ್ಕೆ ಬರುತ್ತೇನೆ. ನಿನ್ನ ಮನೆಯ ಮುಂದೆಯಿಂದಲೇ ಪ್ರವಾಸ ಶುರು ಮಾಡುತ್ತೇನೆ. ನೀನು ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲ ಗನ್ ಮ್ಯಾನ್ ಬರಲ್ಲ, ನಾನೊಬ್ಬನೇ ಬರುತ್ತೇನೆ.
ಅಲ್ಲಿಂದಲೇ ಪ್ರವಾಸ ಶುರು ಮಾಡುತ್ತೇನೆ ತಡಿ ನೋಡೊಣ ಎಂದು ಸವಾಲೆಸೆದರು. ಇನ್ನೂ ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.