ಮಂಗಳವಾರದ ವಿಶೇಷ: ದುರ್ಗೆ ಒಲಿಯಲು ಹೀಗೆ ಮಾಡಿ, ಅದೃಷ್ಟ ನಿಮ್ಮ ಹಿಂಬಾಲಿಸುತ್ತೆ!
ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ದಿನಕ್ಕೂ ತನ್ನದೇ ಆದ ವಿಶೇಷತೆ ಇದೆ. ಒಂದೊಂದು ವಾರವನ್ನ ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಆ ದಿನಗಳು ಗ್ರಹಗಳೊಂದಿಗೆ ಸಹ ಸಂಪರ್ಕವನ್ನ ಹೊಂದಿದ್ದು, ಅವುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ದಿನ ಹಾಗೂ ಗ್ರಹಕ್ಕೆ ತಕ್ಕಂತೆ ಆಚರಣೆಗಳನ್ನ ಮಾಡಲಾಗುತ್ತದೆ. ಉಪವಾಸ, ವ್ರತ ಹಾಗೂ ಪೂಜೆಗಳನ್ನ ಮಾಡುವುದರಿಂದ ನಮ್ಮ ಕಷ್ಟ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಇದೆ.
ವಾರದ 7 ದಿನಗಳಲ್ಲಿ ಮಂಗಳವಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಬಜರಂಗಬಲಿ ಪೂಜೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಇದಲ್ಲದೇ ಈ ದಿನ ವಿವಿಧ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಅವುಗಳ ಪರಿಹಾರವನ್ನೂ ಕಂಡುಕೊಳ್ಳಬಹುದು. ಮಂಗಳವಾರದಂದು ಇವುಗಳನ್ನು ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ. ಹಾಗಾದರೆ, ಮಂಗಳವಾರ ನಾವು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ
ವ್ಯಾಪಾರದಲ್ಲಿ ಹಣ:-
ನೀವು ನಿಮ್ಮ ವ್ಯಾಪಾರದಲ್ಲಿ ಮತ್ತಷ್ಟು ಲಾಭವನ್ನು ಪಡೆದುಕೊಳ್ಳಲು ಬಯಸಿದರೆ ಮತ್ತು ನಿಮ್ಮ ವ್ಯವಹಾರದ ಅಡಿಪಾಯವನ್ನು ಇತರರಿಗಿಂತ ಗಟ್ಟಿಯಾಗಿಸಲು ಬಯಸಿದರೆ, ಇಂದು ಖಾಲಿ ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಅದರ ಮೇಲೆ ಕಾಡಿಗೆಯನ್ನು ಹಚ್ಚಿ, ನಂತರ ಆ ಖಾಲಿ ಮಡಿಕೆಯ ಮೇಲೆ ಒಂದು ಮುಚ್ಚಳವನ್ನು ಹಾಕಿ ಹರಿಯುವ ನೀರಿನಲ್ಲಿ ಹರಿಯಲು ಬಿಡಬೇಕು.
ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಲು ಮತ್ತು ಜೀವನದಲ್ಲಿ ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಇರಲು ಬಯಸಿದರೆ, ಮಂಗಳವಾರದ ದಿನದಂದು ನಾಗಕೇಸರಿ ಹೂವುಗಳನ್ನು ತೆಗೆದುಕೊಂಡು ಬನ್ನಿ ಈಗ ಆ ಹೂವಿನ ಮೇಲೆ ಒಂದು ಹನಿ ಜೇನುತುಪ್ಪವನ್ನು ಹಚ್ಚಿ. ಇದರ ನಂತರ, ಆ ನಾಗಕೇಸರ ಹೂವನ್ನು ದುರ್ಗಾ ದೇವಿಗೆ ಅರ್ಪಿಸಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ
ಪ್ರೀತಿಯನ್ನು ಹೆಚ್ಚಿಸಲು ಮತ್ತು ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಇರುವಂತೆ ಮಾಡೆಂದು ತಾಯಿ ದುರ್ಗೆಯನ್ನು ಬೇಡಿಕೊಳ್ಳಿ.
ಕೆಲಸದಲ್ಲಿ ಯಶಸ್ಸು:
ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನೀವು ಬಯಸಿದರೆ, ಇಂದು 250 ಗ್ರಾಂ ಹೆಸರು ಕಾಳನ್ನು ತೆಗೆದುಕೊಳ್ಳಿ. ಬಳಿಕ ಅದನ್ನು ದುರ್ಗಾ ದೇವಿಯ ದೇವಸ್ಥಾನದಲ್ಲಿ ದಾನ ಮಾಡಿ. ಹಾಗೆಯೇ ಸಾಧ್ಯವಾದರೆ ಈ ದಿನ ದುರ್ಗಾ ಸಪ್ತಶತಿಯನ್ನೂ ಪಠಿಸಿ. ನಿಮಗೆ ಇಂದು ಸಂಪೂರ್ಣ ಪಾರಾಯಣವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ದುರ್ಗಾ ಸಪ್ತಶತಿಯ ಒಂದು ಅಥವಾ ಎರಡು ಪುಟಗಳನ್ನು ಮಾತ್ರ ಪಠಿಸಿ. ಮುಂದಿನ ದಿನಗಳಲ್ಲಿ ಉಳಿದ ಪುಟಗಳನ್ನು ಸ್ವಲ್ಪ ಸ್ವಲ್ಪವಾಗಿ ಪೂರ್ಣಗೊಳಿಸಿ
ಜೀವನದಲ್ಲಿ ಸಂತೋಷ, ಸಮೃದ್ಧಿ
ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ಅದಕ್ಕಾಗಿ ನೀವು ಇಂದು ನಾಗಕೇಸರಿ ಮರಕ್ಕೆ ನಮಸ್ಕಾರವನ್ನು ಸಲ್ಲಿಸಬೇಕು ಮತ್ತು ಆ ಮರವನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸಬೇಕು. ನಾಗಕೇಸರಿ ಮರ ಸಿಗದೇ ಇದ್ದರೆ ದಿನಸಿ ಅಂಗಡಿಯಿಂದ ಒಣ ನಾಗಕೇಸರ ಮರದ ತುಂಡನ್ನು ಅಥವಾ ಒಣ ನಾಗಕೇಸರ ಹೂವನ್ನು ಖರೀದಿಸಿ ಪೂಜೆ ಮಾಡಿ ಮಂಗಳವಾರ ಕಳೆಯುವವರೆಗೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಮರುದಿನ, ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ, ಆ ಮರದ ತುಂಡನ್ನು ಅಥವಾ ಹೂವನ್ನು ಹರಿಯುವ ನೀರಿನಲ್ಲಿ ತೇಲಿಬಿಡಬೇಕು.
ಮನೆಯಿಂದ ಹೊರಗೆ ಹೋಗುವಾಗ ಈ ಕೆಲಸ ಮಾಡಿ:
ನೀವು ಇಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದಕ್ಕಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಆ ಕೆಲಸದಲ್ಲಿ ನಿಮ್ಮ ಯಶಸ್ಸನ್ನು ಖಚಿತಪಡಿಸಿಕೊಳ್ಳಲು, ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ಹಣೆಯ ಮೇಲೆ ಕುಂಕುಮದ ತಿಲಕವನ್ನು ಹಚ್ಚಿಕೊಂದು ದುರ್ಗಾ ದೇವಿಯ ಆಶೀರ್ವಾದವನ್ನೂ ಪಡೆಯಿರಿ. ಇದರಿಂದ ನೀವು ಮಾಡಲು ಹೊರಟ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ.