ಬಿಜೆಪಿ, ಜೆಡಿಎಸ್ʼನ ಸಾಕಷ್ಟು ಜನ ಕಾಂಗ್ರೆಸ್‌ʼಗೆ ಬರೋದಕ್ಕೆ ಸಿದ್ಧರಿದ್ದಾರೆ: ಎನ್ ಚೆಲುವರಾಯಸ್ವಾಮಿ

Date:

ಬಿಜೆಪಿ, ಜೆಡಿಎಸ್ʼನ ಸಾಕಷ್ಟು ಜನ ಕಾಂಗ್ರೆಸ್‌ʼಗೆ ಬರೋದಕ್ಕೆ ಸಿದ್ಧರಿದ್ದಾರೆ: ಎನ್ ಚೆಲುವರಾಯಸ್ವಾಮಿ

ಬೆಂಗಳೂರು: ಬಿಜೆಪಿ, ಜೆಡಿಎಸ್ʼನ ಸಾಕಷ್ಟು ಜನ ಕಾಂಗ್ರೆಸ್‌ʼಗೆ ಬರೋದಕ್ಕೆ ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಯಾಕೆ ಹೀಗೆ ಮಾತಾಡಿದ್ರೋ ಗೊತ್ತಿಲ್ಲ. ಲೋಕಸಭೆ ಉಪ ಚುನಾವಣೆ ಸಮಯದಲ್ಲಿ ಅನೇಕರು ಕಾಂಗ್ರೆಸ್‌ಗೆ ಬರ್ತಾರೆ ಎಂಬ ಸುದ್ದಿ ಇತ್ತು.
ಆದಾದ ಮೇಲೆ 3 ಉಪ ಚುನಾವಣೆ ಗೆದ್ದ ಬಳಿಕ ಅನೇಕ ಬಿಜೆಪಿ, ಜೆಡಿಎಸ್ ಸಾಕಷ್ಟು ಜನ ಬರೋದಕ್ಕೆ ಸಿದ್ಧರಿದ್ದಾರೆ. ಯಾರನ್ನ ಸೇರಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಯಾರ ಅವಶ್ಯಕತೆ ಇಲ್ಲ, 136 ಶಾಸಕರು ಇದ್ದೇವೆ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಹೈಕಮಾಂಡ್, ಸಿಎಂ, ಡಿಸಿಎಂ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಇನ್ನೂ ಜನಾರ್ದನ ರೆಡ್ಡಿಗೆ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳೋಕೆ ಹೇಳಿ. ಮೊದಲು ಯತ್ನಾಳ್, ಜಾರಕಿಹೋಳಿಯನ್ನು ಸರಿ ಮಾಡಿ, ಅಮೇಲೆ ಮಾತಾಡಲಿ. ನಿತ್ಯ ವಿಜಯೇಂದ್ರ ಬಗ್ಗೆ ಮಾತಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳೋಕೆ ಬಿಜೆಪಿ ಹೈಕಮಾಂಡ್‌ಗೆ ಆಗಿಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಅಲ್ಲದೇ ಎಐಸಿಸಿ ಭದ್ರವಾಗಿದೆ‌ ಎಂದರು.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...