ಕೊಲೆ ಆರೋಪಿ ದರ್ಶನ್ಗೆ ಶುರುವಾಯ್ತು ‘ಸುಪ್ರೀಂ’ ಸಂಕಷ್ಟ! ಇಂದು ಅರ್ಜಿ ವಿಚಾರಣೆ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಲಿದೆ. ಸುಪ್ರಿಂ ಕೋರ್ಟ್ ನ್ಯಾ. ಪರ್ದಿವಾಲ ಮತ್ತು ನ್ಯಾ.ಮಹದೇವನ್ ಅವರ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಆಗಲಿದೆ.
ಪೊಲೀಸರ ಪರ ನೇಮಕವಾಗಿರುವ ವಕೀಲ ಅನಿಲ್ ಸಿ ನಿಶಾನಿಯವರ ಜೊತೆ ಚರ್ಚೆ ಆಗಿದೆ. ಅನಿಲ್ ನಿಶಾನಿಯವ್ರನ್ನ ಭೇಟಿ ಮಾಡಿ ಎಸ್ ಪಿಪಿ ಪ್ರಸನ್ನ ಕುಮಾರ್ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ಭೇಟಿ ಮಾಡಿ ಪ್ರಕರಣದ ಬಗ್ಗೆ ಸಂಪೂರ್ಣ ಚರ್ಚೆ ಮಾಡಿದ್ದಾರೆ. ಸುಪ್ರಿಂ ಕೋರ್ಟ್‌ಗೆ ಈಗಾಗಲೇ ತರ್ಜುಮೆ ಮಾಡಿರೋ ರಿಪೋರ್ಟ್ ಪೊಲೀಸರು ಸಲ್ಲಿಸಿದ್ದಾರೆ.
ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ಎಸ್ ಎಲ್ ಪಿ ಪ್ರಶ್ನಿಸಿದ್ದರು. ನಟ ದರ್ಶನ್, ಅವರ ಆಪ್ತೆ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೆ ಡಿಸೆಂಬರ್ 13 ರಂದು ಪೂರ್ಣಾವಧಿಗೆ ಜಾಮೀನು ಮಂಜೂರಾಗಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿ ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿತ್ತು. ನಟ ದರ್ಶನ್ ತೂಗದೀಪ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೆ ಕೂಡಲೇ ಬಂಧನವಾಗಿ ಮತ್ತೆ ಜೈಲು ಸೇರಬೇಕಾಗುತ್ತದೆ. ಹೀಗಾಗಿ, ನಟ ದರ್ಶನ್ ಹಾಗೂ ಅಭಿಮಾನಿಗಳು ಸುಪ್ರೀಂ ಕೋರ್ಟ್ ವಿಚಾರಣೆ ಮೇಲೆ ನಿಗಾ ಇಟ್ಟಿದ್ದಾರೆ.