ಸುಧಾಕರ್ ಆಡಿರುವ ಮಾತುಗಳು ಅವರಿಗಾಗಲೀ ನನಗಾಗಲೀ ಶೋಭೆ ನೀಡಲ್ಲ: ಬಿವೈ ವಿಜಯೇಂದ್ರ
ಬೆಂಗಳೂರು: ಸುಧಾಕರ್ ಆಡಿರುವ ಮಾತುಗಳು ಅವರಿಗಾಗಲೀ ನನಗಾಗಲೀ ಶೋಭೆ ನೀಡಲ್ಲ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಡೀ ದೇಶದಲ್ಲಿ ಒಂದೇ ತೆರನಾಗಿದೆ, ತಾನು ಬದಲಾಯಿಸುವ ಅಥವಾ ಹಸ್ತಕ್ಷೇಪ ಮಾಡುವುದಕ್ಕೆ ಹೋಗಿಲ್ಲ, ಆಯ್ಕೆಯಾಗಿರುವ ವ್ಯಕ್ತಿ ಪಕ್ಷದ ಕಾರ್ಯಕರ್ತ ಮತ್ತು ಸುಧಾಕರ್ ಸಂಬಂಧಿಕನಾಗಿದ್ದಾನೆ ಎಂದು ಹೇಳಿದರು.
ಇನ್ನೂ ತಮ್ಮ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಸುಧಾಕರ್ ಅವರು, ಸಮಾಧಿ ಮಾಡಲಾಗುತ್ತಿದೆ ಎಂಬ ಮಾತುಗಳನ್ನು ಆಡಬಾರದು, ಅದು ತನಗೆ ಮತ್ತು ಅವರಿಗೂ ಶೋಭೆ ನೀಡಲ್ಲ, ನಾನು ತಿದ್ದುಕೊಳ್ಳಬೇಕು ಅಂತ ಅವರು ಮತ್ತು ಇತರರು ಹೇಳಿದ್ದಾರೆ.
ಏನಾದರೂ ಇದ್ರೆ ನಾನು ಖಂಡಿತ ತಿದ್ದಿಕೊಳ್ತೇನೆ. ಸುಧಾಕರ್ ಅವರು ತಾಳ್ಮೆ ಮುಗೀತು ಇನ್ನು ಯುದ್ಧ ಎಂದಿದ್ದಾರೆ. ಆ ರೀತಿ ಮಾತಾಡಬಾರದು. ನಾನು ಸುಧಾಕರ್ ಅವರ ಜೊತೆ ಮತ್ತು ಇತರರ ಜೊತೆ ಮಾತಾಡ್ತೀನಿ. ನಾನು ಪಕ್ಷ ಸಂಘಟನೆ ಮಾತ್ರ ಮಾಡ್ತಿದ್ದೇನೆ. ನನ್ನ ಮೇಲೆ ತಪ್ಪು ಹೊರೆಸೋದು ಬೇಡ ಎಂದು ಹೇಳಿದರು.