ವಿಜಯನಗರ- ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರೋ ಘಟನೆ ನಡೆದಿದೆ.
ಪಾಸ್ಟರ್ ನೆಕ್ಸೋನ್( 40) ಅರುಣ್( 35) ಮೃತ ದುರ್ದೈವಿಗಳು ಅಂತ ಗುರುತಿಸಲಾಗಿದೆ.
ಕೊಟ್ಟೂರು ಪಟ್ಟಣದಿಂದ ಹೂವಿನ ಹಡಗಲಿ ಚರ್ಚ್ ಗೆ ಆಗಮಿಸುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕೊಟ್ಟೂರಿನ ಕ್ವೀನ್ ಮೇರಿ ಶಾಲೆಯ ವ್ಯವಸ್ಥಾಪಕ ಪಾಸ್ಟರ್ ನೆಕ್ಸೋನ್, ಅರುಣ್ ಬೈಕ್ ನಲ್ಲಿ ಬರುವಾಗ ಈ ಘಟನೆ ನಡೆದಿದ್ದು, ಪಾಸ್ಟರ್ ನೆಕ್ಸೋನ್ ಸ್ಥಳದಲ್ಲೇ ಮೃತಪಟ್ಟಿದ್ದು, ಅರುಣ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.