ಯುಜುವೇಂದ್ರ ಚಹಲ್-ಧನಶ್ರೀ 4 ವರ್ಷಗಳ ದಾಂಪತ್ಯ ಜೀವನ ಅಂತ್ಯ

Date:

ಯುಜುವೇಂದ್ರ ಚಹಲ್-ಧನಶ್ರೀ 4 ವರ್ಷಗಳ ದಾಂಪತ್ಯ ಜೀವನ ಅಂತ್ಯ

ಹಾರ್ದಿಕ್ ಪಾಂಡ್ಯಾ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಆಟಗಾರನ ಯುಜ್ವೇಂದ್ರ ಚಾಹಲ್ ಹಾಗೂ ಪತ್ನಿ ಧನಶ್ರೀ ವರ್ಮಾ ದೂರವಾಗ್ತಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿ ಹೆಚ್ಚುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಹಾಗೂ ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ನಡುವೆ ವಿಚ್ಛೇದನದ ರೂಮರ್ಸ್ ಹರಿದಾಡ್ತಿದ್ದು, ಇದೀಗ ನಿಜವಾಗಿದೆ.
ಕ್ರಿಕೆಟಿಗ ಮತ್ತು ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ವಿಚ್ಛೇದನವು ಕಾನೂನುಬದ್ಧವಾಗಿ ಅಂತಿಮವಾಗಿದೆ.. ಸಂಬಂಧಿತ ಎಲ್ಲಾ ಔಪಚಾರಿಕತೆಗಳು ಗುರುವಾರ ನ್ಯಾಯಾಲಯದಲ್ಲಿ ಪೂರ್ಣಗೊಳ್ಳಲಿವೆ ಎಂದು ಮಾಹಿತಿ ಲಭ್ಯವಾಗಿದೆ.
ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಬಾಂದ್ರಾ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಸುದ್ದಿ ವಾಹಿನಿಯೊಂದಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ವಿಚ್ಛೇದನದ ಬಗ್ಗೆ ಚರ್ಚೆ ನಡೆಯುತ್ತಿತ್ತು .
ಈ ಜೋಡಿಯ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಸಹ ವಿಚ್ಛೇದನದ ಬಗ್ಗೆ ಸುಳಿವು ನೀಡುತ್ತಿವೆ. ಧನಶ್ರೀ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆಶೀರ್ವಾದ ಪಡೆಯಲು ಒತ್ತಡ… ಎಂದು ಧನಶ್ರೀ ಪೋಸ್ಟ್ ಮಾಡಿದ್ದಾರೆ.. ಅಷ್ಟೇ ಅಲ್ಲ, ಯುಜ್ವೇಂದ್ರ ಸಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ದೇವರು ನನ್ನನ್ನು ಹಲವು ಬಾರಿ ರಕ್ಷಿಸಿದ್ದಾನೆ…” ಎಂಬ ಬರಹವಿರುವ ಪೋಸ್ಟ್ ಶೇರ್ ಮಾಡಿದ್ದಾರೆ. ಇದರಿಂದಾಗಿ ಇಬ್ಬರೂ ಡಿವೋರ್ಸ್ ಪಡೆದದ್ದು ಖಚಿತವಾಗಿದೆ.

Share post:

Subscribe

spot_imgspot_img

Popular

More like this
Related

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ!

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ! ಜನರು...