ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಒಂದೇ ರಾತ್ರಿಯಲ್ಲಿ 8 ಲಾರಿಗಳ 16 ಬ್ಯಾಟರಿ ಸೇರಿದಂತೆ 150 ಲೀ. ಡೀಸೆಲ್ ಕಳವು ಮಾಡಿರುವ ಘಟನೆ ಜರುಗಿದೆ.
ರಾತ್ರಿ ವೇಳೆ ಬ್ಯಾಟರಿ, ಡೀಸೆಲ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಸ್ಕಾರ್ಪಿಯೊ ಕಾರಿನಲ್ಲಿ ಬಂದಿದ್ದ ಮೂವರಿಂದ ರೈಲು ನಿಲ್ದಾಣದ ಬಳಿ 12 ಬ್ಯಾಟರಿ, ಹಳೆ ಬಸ್ ನಿಲ್ದಾಣದ 4 ಬ್ಯಾಟರಿ ಮತ್ತು ಪಾಲನಜೋಗನಹಳ್ಳಿ ಬಳಿ ನಿಲ್ಲಿಸಿದ್ದ ಲಾರಿಗಳಿಂದ 150 ಲೀ. ಡೀಸೆಲ್ ಕಳವು ಮಾಡಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.