ಜೀವನದಲ್ಲಿ ಬದಲಾವಣೆ ಆಗಲು ಬುಧವಾರ ತಪ್ಪದೇ ಹೀಗೆ ಮಾಡಿ!
ಪ್ರತಿದಿನವೂ ಯಾವುದಾದರೊಂದು ದೇವರು ಅಥವಾ ದೇವತೆಯನ್ನು ಪೂಜಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಅದೇ ರೀತಿ ಬುಧವಾರದ ದಿನದಂದು ಗಣಪತಿ ದೇವನನ್ನು ಪೂಜಿಸಲಾಗುತ್ತದೆ. ಬುಧವಾರದ ದಿನದಂದು ಗಣಪತಿ ದೇವನನ್ನು ಪೂಜಿಸುವುದು ಮಾತ್ರವಲ್ಲದೇ, ಈ ದಿನ ಗ್ರಹಗಳ ರಾಜನಾದ ಬುಧನನ್ನು ಕೂಡ ಪೂಜಿಸಲಾಗುತ್ತದೆ. ಬುಧವಾರದ ಪೂಜೆಯಿಂದ ವ್ಯಕ್ತಿಯ ಜಾತಕದಲ್ಲಿ ಬುಧನ ಸ್ಥಾನವು ಬಲವಾಗುವುದು. ಹಾಗೂ ವ್ಯಕ್ತಿಯ ಜೀವನದ ಅನೇಕ ಸಮಸ್ಯೆಗಳು ದೂರಾಗುವುದು.
ಬುಧವಾರದಂದು ಶಾಸ್ತ್ರೋಕ್ತವಾಗಿ ಗಣಪತಿಯನ್ನು ಪೂಜಿಸುವುದರಿಂದ ಭಕ್ತಾದಿಗಳ ಎಲ್ಲಾ ಕಷ್ಟಗಳು ದೂರವಾಗಿ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಗಣೇಶನನ್ನು ಮಂಗಳಮೂರ್ತಿ ಮತ್ತು ವಿಘ್ನಹರ್ತ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬುಧವಾರದಂದು ಗಣಪತಿಯ ನಾಮಸ್ಮರಣೆ ಮಾಡಿ ಪೂಜಿಸುವ ಮೂಲಕ ಹೊಸ ಕೆಲಸ ಆರಂಭಿಸಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬುಧವಾರದಂದು ಈ ಕ್ರಮಗಳನ್ನು ಅನುಸರಿಸುವ ಮೂಲಕ ಒಬ್ಬ ವ್ಯಕ್ತಿಯು ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಸಂತೋಷ ಮತ್ತು ಸಮೃದ್ಧಿಯು ಆತನ ಮನೆಗೆ ಆಗಮಿಸುತ್ತದೆ. ಇದರೊಂದಿಗೆ ರೋಗಗಳು, ದುಃಖ ಮತ್ತು ಭಯ ಇತ್ಯಾದಿಗಳೂ ದೂರವಾಗುತ್ತವೆ. ಬುಧವಾರ ನಾವು ಏನು ಮಾಡಬೇಕು ಗೊತ್ತೇ..?
ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಬುಧವಾರದಂದು ಒಂದು ರೂಪಾಯಿ ನಾಣ್ಯದಿಂದ ಈ ಕೆಲಸವನ್ನು ಮಾಡಿ. ಈ ಪರಿಹಾರವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಬುಧವಾರದಂದು ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಅದರಲ್ಲಿ ಒಂದು ಹನಿ ಸಾಸಿವೆ ಎಣ್ಣೆಯನ್ನು ಹಾಕಿ ಶನಿ ದೇವಸ್ಥಾನದಲ್ಲಿ ಇಟ್ಟು ಆರ್ಥಿಕ ಪ್ರಗತಿಗಾಗಿ ಬೇಡಿಕೊಳ್ಳಿ. ಈ ಪರಿಹಾರದಿಂದ ಶನಿದೋಷದಿಂದ ಪರಿಹಾರ ಸಿಗುತ್ತದೆ.
ನೀವು ಬುಧವಾರದ ದಿನದಂದಿ ಯಾವುದೇ ಮಂಗಳಮುಖಿಯರಿಗೆ ಒಂದಿಷ್ಟು ಹಣವನ್ನು ದಾನ ಮಾಡಿ ಅವರಿಂದ ಒಂದು ರೂಪಾಯಿ ನಾಣ್ಯವನ್ನು ಹಿಂದಿರುಗಿ ಪಡೆದುಕೊಳ್ಳಿ. ಇದರಿಂದ ಅವರು ಸಂತೋಷದಿಂದ ನಿಮಗೆ ಒಂದು ರೂಪಾಯಿ ನೀಡಿದರೆ, ಈ ನಾಣ್ಯವನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಿ. ಇದು ನಿಮಗೆ ಯಾವಾಗಲೂ ಧನಾಗಮನದ ಆಶೀರ್ವಾದವನ್ನು ತರುತ್ತದೆ.
ನಿಮ್ಮ ಜೀವನದಲ್ಲಿ ನಿಮಗೆ ಶತ್ರುಗಳು ಪದೇ ಪದೇ ತೊಂದರೆಗಳನ್ನು ನೀಡುತ್ತಿದ್ದರೆ, ಶತ್ರುಗಳನ್ನು ತೊಲಗಿಸಲು ಕಲ್ಲಿದ್ದಲಿನಿಂದ ಕಲ್ಲಿನ ಮೇಲೆ ಶತ್ರುವಿನ ಹೆಸರನ್ನು ಬರೆದು ಆ ಕಲ್ಲನ್ನು ಹರಿಯುವ ನೀರಿನಲ್ಲಿ ಬುಧವಾರ ತೇಲಿ ಬಿಡಬೇಕು. ಸತತ ನಾಲ್ಕು ಬುಧವಾರಗಳ ಕಾಲ ನೀವು ಈ ಕೆಲಸವನ್ನು ಮಾಡುವುದರಿಂದ ಶತ್ರುಗಳಿಂದ ಮುಕ್ತಿಯನ್ನು ಕಂಡುಕೊಳ್ಳುತ್ತೀರಿ.
ಆರೋಗ್ಯಕರ, ಸುಂದರ ಮತ್ತು ಆಕರ್ಷಕ ದೇಹ ಸೌಂದರ್ಯವನ್ನು ಪಡೆದುಕೊಳ್ಳುವುದಕ್ಕಾಗಿ, ಬುಧವಾರದ ದಿನದಂದು ಗೋಧಿಯಿಂದ ರೊಟ್ಟಿಗಳನ್ನು ತಯಾರಿಸಿ. ಅದಕ್ಕೆ ಬೆಲ್ಲವನ್ನು ಹಚ್ಚಿ ಹಸುಗಳಿಗೆ ತಿನ್ನಲು ನೀಡಿ. ಇದನ್ನು ನೀವು ಪ್ರತೀ ಬುಧವಾರ ಮಾಡುತ್ತಾ ಹೋದರೆ, ಅದರಿಂದ ನೀವು ಉತ್ತಮ ಆರೋಗ್ಯವನ್ನು ಹಾಗೂ ದೈಹಿಕ ಸೌಂದರ್ಯವನ್ನು ಪಡೆದುಕೊಳ್ಳುತ್ತೀರಿ.
ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುವುದಕ್ಕಾಗಿ ನೀವು ಬುಧವಾರದ ದಿನದಂದು ಅಕ್ಕಿ ಮತ್ತು ಕುಂಕುಮವನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಅವೆರೆಡನ್ನು ಬೆರೆಸಿ ಎಕ್ಕದ ಗಿಡಗಳಿಗೆ ಅರ್ಪಿಸಬೇಕು. ಹಾಗೂ ಬುಧವಾರ ಬೆಳಿಗ್ಗೆ ನೀವು ಈ ಸಸ್ಯವನ್ನು ಪೂಜಿಸಬೇಕು. ಅಲ್ಲದೆ, ಈ ದಿನದಂದು ಬೇವಿನ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುತ್ತೀರಿ.