ಮಹಾಕುಂಭ ಮೇಳಕ್ಕೆ ಇಂದು ತೆರೆ! ಹೈಅಲರ್ಟ್ ಘೋಷಣೆ
ಮಹಾಕುಂಭಮೇಳಕ್ಕೆ ಇಂದು ಅಂದರೆ ಶುಭ ಶಿವರಾತ್ರಿ ದಿನದಂದು ತೆರೆ ಬೀಳಲಿದೆ. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳಕ್ಕೆ ದಾಖಲೆ ಲೆಕ್ಕದಲ್ಲಿ ಭಕ್ತರು ಸೇರಿ ಚರಿತ್ರೆಯನ್ನೇ ಬರೆದಿದ್ದಾರೆ. ಜನವರಿ 13ರಂದು ಶುರುವಾದ ಮಹಾಕುಂಭಮೇಳಕ್ಕೆ ಇಲ್ಲಿಯವರೆಗೂ 62 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಜಗತ್ತಿನ ಮೂಲೆ ಮೂಲೆಯಿಂದ ಕೋಟಿ ಕೋಟಿ ಭಕ್ತರು ಮಹಾಕುಂಭಮೇಳದಲ್ಲಿ ಭಾಗಿಯಾಗಿ ಜೀವನ ಪಾವನ ಎನಿಸಿಕೊಂಡಿದ್ದಾರೆ. ಈ ಹೊತ್ತಲ್ಲೇ ಬಾಲಿವುಡ್ ನಟ, ನಟಿಯರು ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಪುಣ್ಯಸ್ನಾನ ಮಾಡಿದ್ದಾರೆ
ಒಂದೇ ದಿನ, ಇನ್ನೊಂದೇ ದಿನ ಬಾಕಿ. 144 ವರ್ಷಗಳಿಗೊಮ್ಮೆ ಜಗತ್ತಿನಲ್ಲಿ ನಡೆಯೋ ಅದ್ಭುತ. ನೂರಾರು ಕೋಟಿ ಭಕ್ತರ ಸಂಗಮ. ತ್ರೀವೇಣಿ ಸಂಗಮದ ಗಂಗೆಯಲ್ಲಿ ಪುಣ್ಯಸ್ನಾನ. ಲಕ್ಷ ಲಕ್ಷ ನಾಗಸಾಧುಗಳ ಶಕ್ತಿ ದರ್ಶನ. ಈ ಶತಮಾನದಲ್ಲಿ ನಡೆದ ಈ ಎಲ್ಲಾ ವೈಭವಕ್ಕೆ ವಿರಾಮ ಬಿಳೋ ಕಾಲ ಬಂದಿದೆ.
ಕಳೆದ 22ದಿನಗಳಿಂದ ಪ್ರಯಾಗ್ರಾಜ್ನಲ್ಲಿ ಈ ಎಲ್ಲಾ ವೈಭವ ಇದೀಗ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನೊಂದೇ ದಿನ ಅಂದ್ರೆ, ಇಂದು ಶಿವರಾತ್ರಿ ಹಬ್ಬಕ್ಕೆ ಈ ಮಹಾಕುಂಭಮೇಳ ಸಂಪನ್ನಗೊಳ್ಳಲಿದೆ. ಇನ್ನು ಶಿವರಾತ್ರಿ ಇರೋದ್ರಿಂದ 2 ಕೋಟಿಗೂ ಹೆಚ್ಚು ಭಕ್ತಾದಿಗಳು ದೇಶದ ಮೂಲೆ ಮೂಲೆಯಿಂದ ಆಗಮಿಸುವ ನಿರೀಕ್ಷೆ ಇದೆ.
ಇನ್ನು, ಈಗಾಗಲೇ ಈ ಮಹಾಕುಂಭಮೇಳದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಬಂದ 63 ಕೋಟಿಗೂ ಅಧಿಕ ಜನ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ. ಈ ಹೊತ್ತಲ್ಲೇ ಬಾಲಿವುಡ್ ನಟ ನಟಿಯರು ಕೂಡ ಮಹಾಕುಂಭಮೇಳದಲ್ಲಿ ಭಾಗಿಯಾಗಿ ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.