ಅಕ್ರಮ ಚಿನ್ನ ಸಾಗಾಟ ಆರೋಪ: ಕಿಚ್ಚ ಸುದೀಪ್ ಸಿನಿಮಾ ನಾಯಕಿ ಅರೆಸ್ಟ್

Date:

ಅಕ್ರಮ ಚಿನ್ನ ಸಾಗಾಟ ಆರೋಪ: ಕಿಚ್ಚ ಸುದೀಪ್ ಸಿನಿಮಾ ನಾಯಕಿ ಅರೆಸ್ಟ್

ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ. ಸುಮಾರು 15ಕೆಜಿ ಚಿನ್ನ ಅಕ್ರಮ ಸಾಗಾಟ ಆರೋಪದಲ್ಲಿ ನಟಿ ರನ್ಯಾ ರಾವ್ ರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 4ರ ಮಧ್ಯರಾತ್ರಿ ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಚಿನ್ನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ಮಧ್ಯರಾತ್ರಿ ಆಗಮಿಸಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಡಿಆರ್‌ಐ ಅಧಿಕಾರಿಗಳು ಮಾರ್ಚ್‌4ರಂದು ರಾತ್ರಿ ನಟಿ ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪ ರನ್ಯಾ ಮೇಲೆ ಇದೆ. ವಿಚಾರಣೆ ನಡೆಯುತ್ತಿದೆ. ಎಡಿಜಿಪಿ ರಾಮಚಂದ್ರರಾವ್ ಅವರ ಪುತ್ರಿ ಆಗಿರುವ ರನ್ಯಾ ರಾವ್‌ ಕನ್ನಡದಲ್ಲಿ ಕಿಚ್ಚ ಸುದೀಪ್‌ ಜೊತೆಗೆ ಮಾಣಿಕ್ಯ ಸಿನೆಮಾ ಸೇರಿದಂತೆ ಪಟಾಕಿ ಹಾಗೂ ತಮಿಳಿನ ‘ವಾಘಾ’ ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದರು.

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...