ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳ: ಅಧ್ಯಯನಗಳಿಂದ ಬಹಿರಂಗ!
ಬೆಂಗಳೂರು:- ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದ್ದು, ಇದಕ್ಕೆ ನಮ್ಮ ಮೆಟ್ರೋ ದರ ಏರಿಕೆ ಕಾರಣ ಎಂದು ಅಧ್ಯಯನಗಳಿಂದ ಬಹಿರಂಗವಾಗಿದೆ.
ಮೆಟ್ರೋ ದುಬಾರಿ ಬೆನ್ನಲ್ಲೇ ಸಾರ್ವಜನಿಕರು ಮೆಟ್ರೋ ಬಿಟ್ಟು ಸ್ವಂತ ವಾಹನಗಳಲ್ಲಿ ಓಡಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 9 ರಂದು ನಮ್ಮೆ ಮೆಟ್ರೋ ಪ್ರಯಾಣದ ದರವನ್ನು ಏರಿಕೆ ಮಾಡಿತ್ತು. ದರ ಏರಿಕೆ ಬಳಿಕ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಯಾಗಿದೆ. “ನಮ್ಮ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಶೇ. 10.5 ರಷ್ಟು ಇಳಿಕೆಯಾಗಿದೆ ಎಂದು ಎಂದು ಬಿಎಂಆರ್ಸಿಎಲ್ ಹೇಳಿದೆ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಸಾರಿಗೆ ವಲಯದಿಂದ ಶೇಕಡಾ 40 ರಿಂದ 51 ರಷ್ಟು ವಾಯು ಮಾಲಿನ್ಯವಾಗುತ್ತಿದ್ದು, ಧೂಳಿನಿಂದ ಶೇ.17 ರಿಂದ 51 ರಷ್ಟು ವಾಯು ಮಾಲಿನ್ಯವಾಗುತ್ತಿದೆ. ದರ ಏರಿಕೆ ನಂತರ ಫೆಬ್ರವರಿ 10ರಿಂದ ಮಾಲೀನ್ಯ ಹೆಚ್ಚಾಗಿದೆ. ಈ ಮೂಲಕ ಜನರು ಮೆಟ್ರೋ ಬಿಟ್ಟು ಸ್ವಂತ ವಾಹನದಲ್ಲಿ ಓಡಾಡುವವರ ಸಂಖ್ಯೆ ಅಧಿಕವಾಗಿದೆ. ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ದಲ್ಲೂ ಮಾಲೀನ್ಯ ಏರಿಕೆ ಕಂಡಿದೆ