ಬ್ರೆಸ್ಟ್ ಕ್ಯಾನ್ಸರ್‍ನಿಂದ ಒಂದು ಸ್ಥನವನ್ನೆ ಕಳೆದುಕೊಂಡೆ.. ಮಕ್ಕಳಿಗಾಗಿ ಜೀವನದ ಹೋರಾಟ ನಡೆಸಬೇಕೆಂದು ಧೃಡ ನಿರ್ಧಾರ ತಗೊಂಡೆ..
ಕೆಲವೊಂದು ಬಾರಿ ಜೀವನದಲ್ಲಿ ಎಲ್ಲವೂ ಸರಿಯಾಗಿ ಹೋಗ್ತಾ ಇದೆ.. ಸಂಸಾರವನ್ನು ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗ್ತಾ ಇದೇವೆ ಎನ್ನುವಷ್ಟರಲ್ಲಿ ನಮಗೇ ತಿಳಿಯದ ಹಾಗೆ ಒಬ್ಬ ಶತ್ರು ನಮ್ಮನ್ನ ಹಿಂಬಾಲಿಸಿಕೊಂಡು ಬರ್ತಿತ್ತಾನೆ.. ಆ ಶತ್ರು ಬೇರೆ ಯಾರು ಅಲ್ಲ ಅವನೆ ಸಾವು.. ಸಾವು ಯಾರಿಗೆ ಹೇಗೆ ಬರುತ್ತೆ ಅನ್ನೋದು ನಿಖರವಾಗಿ ಹೇಳೋಕೆ ಬರೋದೆ ಇಲ್ಲ.. ಕೆಲವರು ಆಯಸ್ಸು ಮುಗಿದು ಸತ್ತರೆ ಸಾಕಷ್ಟು ಮಂದಿ ಕಾಯಿಲೆ ಬಿದ್ದು ಸಾಯ್ತಾರೆ.. ಈ ಸಾಲಿಗೆ ಬಂದ್ರೆ ರೋಗದಿಂದ ಬವಳಲ್ತಾ ಇರೋ ಅದೆಷ್ಟೋ ಮಂದಿ ಇನ್ನು ನನ್ನ ಜೀವನ ಮುಗೀತು ಅಂತ ತನ್ನನ್ನು ತಾನೆ ಕೊಲೆ ಮಾಡ್ಕೊಳ್ತಾರೆ.. ಸಾವಿನ ವಿರುದ್ದ ಹೋರಾಡೋದು ಜಗತ್ತಲ್ಲಿ ಅತೀ ವಿರಳ… ಈ ವಿಷಯದಲ್ಲಿ ನಾನು ಸಾವನ್ನೇ ಗೆದ್ದು ಬಂದವಳು.. 2014ರಲ್ಲಿ ನಾನು ಬ್ರೆಸ್ಟ್ ಕ್ಯಾನ್ಸರ್(ಸ್ಥನ ಕ್ಯಾನ್ಸರ್)ನಿಂದ ಬಳಲ್ತಾ ಇದ್ದೆ.. ನನಗಾಗ ಇನ್ನು ಮೂರು ತಿಂಗಳ ಮಗು ಇತ್ತು.. ನೀವೆ ಯೋಚಿಸಿ ನನಗಾಗ ಸಾಯುವ ವಯಸ್ಸಾಗಿತ್ತಾ..? ಈ ವಿಷಯ ಕೇಳಿ ಇಡೀ ನನ್ನ ಕುಟುಂಬವೇ ಬೆಚ್ಚಿ ಬಿದ್ದಿದ್ದರು. ಹೇಳೋಕೆ ಹೋದ್ರೆ ‘ಕ್ಯಾನ್ಸರ್’ ಪದ ಹೇಳುದ್ರೆನೆ ಸಾಮಾನ್ಯವಾಗಿ ಎಲ್ರೂ ಹೆದರಲೇ ಬೇಕಲ್ವ..? ಅಂತದ್ರಲ್ಲಿ ಕುಟುಂಬದ ಓರ್ವರಿಗೆ ಕ್ಯಾನ್ಸರ್ ಬಂದಿದೆ ಅಂದ್ರೆ ಹೆದರದೇ ಇರೋಕಾಗುತ್ತಾ ಹೇಳಿ.. ಆದ್ರೆ ನಾನ್ ಮಾತ್ರ ಹೆದ್ರೋಕೆ ಹೋಗ್ಲಿಲ್ಲ.. ನನ್ನಲ್ಲೆ ಆತ್ಮವಿಶ್ವಾಸವನ್ನ ಹೆಚ್ಚಿಸ್ಕೊಂಡೆ.. ಕ್ಯಾನ್ಸರ್ ಬಗ್ಗೆ ಯಾರು ಏನೇ ಹೇಳ್ತಾ ಇದ್ರೂ ಅದರ ಕಡೆ ನಾನು ಗಮನ ಹರಿಸದೇ ನನ್ನ ಪಾಡಿಗೆ ನಾನಿರುತ್ತಿದ್ದೆ. ಅದ್ರಲ್ಲೂ ನಾನು ಹೆದರದೇ ಹಾಗೆ ಇರೋಕು ಒಂದು ಕಾರಣ ಇದೆ. ನನ್ನ ಪತಿ ಓರ್ವ ಡಾಕ್ಟರ್ ನಾನು ಕೂಡ ಅದೇ ಆಸ್ಪತ್ರೆಯ ಸಿಬ್ಬಂಧಿಯಾದ್ರಿಂದ ಬ್ರೆಸ್ಟ್ ಕ್ಯಾನ್ರ್ ಬಗ್ಗೆ ಹೆಚ್ಚಿನ ತಲೆ ಕೆಡುಸ್ಕೊಳ್ಳೋಕೆ ಹೋಗ್ಲೇ ಇಲ್ಲ. ಆದ್ರೂ ಕೂಡ ನನ್ನ ಒಳ ಮನಸ್ಸಿನಲ್ಲಿ ಒಂದು ಹೇಳಿಕೊಳ್ಳಲಾಗದಷ್ಟು ಭಯ.. ಆದ್ರಿಂದ ನಾನು ಭವಿಷ್ಯದ ಹಲವಾರು ಬಯಕೆಗಳನ್ನು ಬಿಟ್ಟೆ.. ಮನಸ್ಸನ್ನ ಚಂಚಲತೆಗೆ ಅವಕಾಶವೇ ಕೊಡದೇ ಮಾನಸಿಕವಾಗಿ ಪ್ರಬಲವಾಗಿ ಬೆಳೆಯಲು ಪ್ರಯತ್ನಿಸಿದೆ.. ಕೆಲವೊಂದು ಬಾರಿ ಕುಟುಂಬಸ್ಥರು ನಮಗೆ ಬೆಂಬಲವಾಗಿ ನಿಂತಿದ್ದರೂ ಕೂಡ ಕೆಲವೊಮ್ಮೆ ಅವರು ನಮ್ಮ ಮೇಲಿಟ್ಟ ಭರವಸೆಯನ್ನು ಕಳೆದುಕೊಂಡು ಬಿಡುತ್ತಾರೆ. ಆದರೆ ನಾನು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕ್ಯಾನ್ಸರ್ ವಿರುದ್ದ ನಿರಂತರ ಹೋರಾಟ ನಡೆಸಿದೆ.. ನಾನು ಕ್ಯಾನ್ಸರ್ ವಿರುದ್ದ ಹೋರಾಡೋಕೆ ಪ್ರಮುಖ ಕಾರಣವೇ ನನ್ನ ಮಗು.. ಅವನಿಗಾಗಿ ನಾನು ಬದುಕಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು. ಅದೇ ರೀತಿ ಕೂಡ ಹೋರಾಟ ನಡೆಸಿದೆ.. ಯಾಕೆ..? ನನ್ನ ಮಕ್ಕಳ ಭವಿಷ್ಯಕ್ಕಾಗಿ.. ಅವರನ್ನು ಒಂದು ಸ್ಥಾನದಲ್ಲಿ ನಿಲ್ಲಿಸುವುದಾಕ್ಕಾಗಿ.. ಅವರು ಬೆಳೆದು ಏನಾದರೊಂದು ಸಾಧಿಸಿ ಅವರೇ ಒಂದು ಭವಿಷ್ಯ ರೂಪಿಸಿಕೊಳ್ಳುವುದಾಕ್ಕಾಗಿ.. ಕೊನೆಗೆ ನಾನೊಂದು ನಿರ್ಧಾರಕ್ಕೆ ಬಂದೆ. ಬ್ರೆಸ್ಟ್ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯೋಕೆ ಮುಂದಾದೆ.. ಟ್ರೀಟ್‍ಮೆಂಟ್‍ನಲ್ಲಿ ನನ್ನ ಒಂದು ಭಾಗದ ಸ್ಥನವನ್ನೇ ಕಳೆದುಕೊಳ್ಳ ಬೇಕಾಯ್ತು..! ಸ್ವಲ್ಪ ಸಮಯ ನಾನು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಆನಂತರ ಎಂದಿನಂತೆ ಮನೆಗೆಲಸ ಮಾಡಿಕೊಳ್ಳುತ್ತಾ, ಕಛೇರಿ ಮುಗಿಸಿ ಬಂದ ನಂತರ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಸಮಯ ಕಳೆದೆ..
ಆದರೆ ನನ್ನ ಕಥೆ ಅಲ್ಲಿಗೆ ಕೊನೆಗೊಂಡಿಲ್ಲ.. ಇದರ ಹಿಂದೆಯೇ ಮತ್ತೊಂದು ಕಥೆ ಹುಟ್ಟಿಕೊಂಡಿತು.. ಧೀರ್ಘ ಕಾಲದ ಬಳಿಕ ನಾನೊಂದು ಭಯಾನಕ ಗರ್ಭಕೋಶ ಕಾಯಿಲೆಗೆ ತುತ್ತಾದೆ.. ನನ್ನ ಗರ್ಭಕೋಶದಲ್ಲಿ ತಂತುರೂಪದಲ್ಲಿ ಏನೋ ಬೆಳೆಯಲು ಆರಂಭಿಸಿರೋದು ಗಮನಕ್ಕೆ ಬಂತು.. ಈ ಕುರಿತಾಗಯೂ ಅನೇಕ ಆಸ್ಪತ್ರೆಗಳಿಗೆ ಭೇಟಿಕೊಟ್ಟೆ.. ವೈದ್ಯರೂ ಕೂಡ ಇದರಿಂದ ಯಾವುದೇ ತೊಂದರೆ ಆಗೊಲ್ಲ ಎಂದು ಹೇಳಿದ್ದರು.. ಆಗೇನಾದರೂ ನಿಮಗೆ ತೀವ್ರ ರಕ್ತಸ್ರಾವ ಆಗೋ ಸಂದರ್ಭ ಬಂದರೆ ಅದನ್ನು ತೆಗೆದುಬಿಡೋಣ ಎಂದಿದ್ದರು.. ಅವರ ಹೇಳಿಕೆಯಂತೆಯೇ ಕೆಲವು ದಿನಗಳ ಬಳಿಕ ನನ್ನ ದೇಹದಿಂದ ರಕ್ತಸ್ರಾವ ಅಧಿಕವಾಗಲು ಆರಂಭಿಸಿತು.. ಇದರಿಂದ ವೈದ್ಯರು ಕೂಡ ವೆಸೊಕ್ಟಮಿ ಆಪರೇಷನ್ ಮಾಡಬೇಕು ಎಂದು ಹೇಳಿಬಿಟ್ಟರು.. ಆರಂಭದಲ್ಲಿ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿರ್ಲಿಲ್ಲ.. ಆಪರೇಷನ್ ನಂತರ ನನ್ನಲ್ಲಿ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆದರೆ ನನಗೆ ಅದು ಆಶ್ಚರ್ಯ ಪಡೋ ವಿಷಯನೇ ಆಗಿರಲಿಲ್ಲ ಯಾಕಂದ್ರೆ ನನಗೆ ಕ್ಯಾನ್ಸರ್ ಇರೋದು ಈ ಮೊದಲೇ ತಿಳಿದಿತ್ತಲ್ವ.. ಆದರೂ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಕಿತಕ್ಕೆ ಒಳಗಾದೆ.. ಬದುಕಬೇಕೆಂದು ಎಷ್ಟೇ ಹೋರಾಟ ನಡೆಸಿದರೂ ಮತ್ತೆ ಮತ್ತೆ ಒಂದಲ್ಲಾ ಒಂದು ರೀತಿಯಲ್ಲಿ ನನಗೆ ಪರೀಕ್ಷೆಗಳು ಒಳಗಾಗುತ್ತಲೇ ಇದೆ ಎಂದು ಬೇಸರವಾಯಿತು. ಆದ್ರೆ ಆಗ್ಲೂ ಕೂಡ ನಾನು ಧೃತಿಗೆಡದೆ ಮತ್ತೆ ನಮ್ಮಿಬ್ಬರು ಮಕ್ಕಳಿಗಾಗಿ ಹೋರಾಟ ನಡೆಸಿದೆ.. ಚಿಕಿತ್ಸೆಯ ಮೊರೆಯೂ ಹೋದೆ.. ದೇಹಕ್ಕೆ ರೇಡಿಯೋ ಥೆರಪಿ ಚಿಕಿತ್ಸೆಯನ್ನೂ ಮಾಡುಸ್ಕೊಂಡೆ.. ಆನಂತರವಾಗಿ ಆ ದೇವರ ದಯೆಯಿಂದ ನಾನು ಗುಣಮುಖನಾದೆ.. ಕೆಲವೊಂದುಬಾರಿ ಸಮಸ್ಯೆಗಳು ಬಂದರೂ ನಾನು ಅದಕ್ಕೆ ತಲೆಗೆಡಸಿಕೊಂಡಿಲ್ಲ. ಧೀರ್ಘಕಾಲದ ಹೋರಾಟಕ್ಕೆ ಅಂತ್ಯ ಹಾಡಿ ಈಗ ನನ್ನೆರೆಡು ಮಕ್ಕಳ ತಾಯಾಗಿ, ಗಂಡನಿಗೆ ಒಂದೊಳ್ಳೆ ಹೆಂಡತಿಯಾಗಿ ಸಂತೋಷದ ಜೀವನ ನಡೆಸುತ್ತಿದ್ದೇನೆ.. ಇಲ್ಲಿ ನಾನು ಅನಾರೋಗ್ಯದಲ್ಲಿ ಬಳಲ್ತಾ ಇದ್ದಾಗ ನನ್ನ ಯಾವೊಬ್ಬ ಸಂಬಂಧಿಕರೂ ಸಹಕಾರ ನೀಡಿರಲಿಲ್ಲ.. ನನಗೆ ಸಪೋರ್ಟಾಗಿ ಇದ್ದಿದ್ದು ನನ್ನ ಗಂಡ ಮಾತ್ರ.. ಅವರಿಂದಲೇ ನಾನು ಇಂದಿಗೂ ಜೀವಂತವಾಗಿ ಇದ್ದೀನಿ.. ಇದೀಗ ನನ್ನದೇ ಆದ ಸಂಸಾರ ದೋಣಿಯಲ್ಲಿ ಸಾಗುತ್ತಿದ್ದೇನೆ…
- ಪ್ರಮೋದ್ ಲಕ್ಕವಳ್ಳಿ
- ಮೂಲ : ದಿ ಲಾಜಿಕಲ್ ಇಂಡಿಯನ್
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!