ಕಲುಷಿತ ಆಹಾರ ಸೇವಿಸಿ ಓರ್ವ ವಿದ್ಯಾರ್ಥಿ ಸಾವು. 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ಚಸ್ಥ
ಮಂಡ್ಯ : ಕಲುಷಿತ ಆಹಾರ ಸೇವಿಸಿ ಓರ್ವ ಮೇಘಾಲಯ ರಾಜ್ಯದ ವಿದ್ಯಾರ್ಥಿ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ಚಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಕಲುಷಿತ ಆಹಾರ ಸೇವಿಸಿದ್ದ ಕೇರ್ ಲಾಂಗ್ (14) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ನೆನ್ನೆ ಪಟ್ಟಣದ ಮದನ್ ಚೌಲ್ಟ್ರಿಯಲ್ಲಿ ಸೇಠು ಸಮುದಾಯದಿಂದ ಹೋಳಿ ಆಚರಣೆ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಪಟ್ಟಣದ ಸಿದ್ದಪ್ಪಾಜಿ ಹೋಟೇಲ್ ಊಟಕ್ಕೆಂದು ಬಾತು ಸರಬರಾಜು ಮಾಡಲಾಗಿತ್ತು.. ಹೋಳಿ ಸಂಭ್ರಮ ಮುಗಿದ ಬಳಿಕ ಬಾತು ತಿಂದು ಜನರು ಉಳಿದ ಊಟವನ್ನು ಪಕ್ಕದಲ್ಲೆ ಇದ್ದ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್ ಗೆ ನೀಡಲಾಗಿತ್ತು. ಈ ಊಟವನ್ನು ರಾತ್ರಿ ಸೇವಿಸಿದ್ದ 30 ವಿದ್ಯಾರ್ಥಿಗಳು ವಾಂತಿ ಭೇಧಿಯಿಂದ ಅಸ್ವಸ್ಥರಾಆಗಿದ್ದು, ಇದರಲ್ಲಿ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಳವಳ್ಳಿ ಆಸ್ಪತ್ರೆಗೆ ಡಿಎಚ್ ಒ ಮೋಹನ್ ಭೇಟಿ, ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದು, ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.