ಅರಿಶಿನ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪ್ರಯೋಜನಗಳೇನು ಗೊತ್ತಾ..?
ನಮ್ಮ ಅಡುಗೆಮನೆಗಳಲ್ಲಿ ಬಳಸುವಂತಹ ಎಷ್ಟೋ ಮಸಾಲೆ ಪದಾರ್ಥಗಳು ನಮ್ಮ ಆರೋಗ್ಯಕ್ಕೂ ಸಹ ತುಂಬಾನೇ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಮಗೆ ಅಜ್ಜ ಅಜ್ಜಿ ಕಾಲದಿಂದಲೂ ಗೊತ್ತಿರುವ ವಿಚಾರವಾಗಿದೆ. ಇಂತಹ ಒಂದು ಮಸಾಲೆ ಪದಾರ್ಥವಾದ ಅರಿಶಿನದ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ಅರಿಶಿನದಿಂದ ಲಭಿಸುತ್ತೆ ಆರೋಗ್ಯ: ಅರಿಶಿನವನ್ನು ಪ್ರತಿ ಮನೆಯಲ್ಲೂ ಅರಿಶಿನವನ್ನು ಮಸಾಲೆ ಡಬ್ಬಿಯಲ್ಲಿ ಪ್ರಮುಖ ಸ್ಥಾನದಲ್ಲಿರುತ್ತದೆ. ನಮ್ಮ ಭಾರತೀಯ ಪ್ರತಿಯೊಂದು ಆಹಾರಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಅರಿಶಿನವು ಆರೋಗ್ಯ ಪ್ರಯೋಜನಗಳನ್ನು ಮಾತ್ರವಲ್ಲದೆ ಅನೇಕ ರೋಗಗಳಿಂದ ನಮ್ಮನ್ನು ದೂರ ಮಾಡುವ ಗುಣಗಳನ್ನು ಹೊಂದಿದೆ. ಯಾವುದೇ ಸಣ್ಣ ಗಾಯಗಳಿಗೆ ಅರಿಶಿನವು ಪ್ರಮುಖ ಔಷಧವಾಗಿದೆ. ಅರಿಶಿನವನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಅಲರ್ಜಿ, ಶೀತ ಮತ್ತು ಕೆಮ್ಮಿನಿಂದ ಉಂಟಾಗುವ ರೋಗಗಳನ್ನು ಗುಣಪಡಿಸುತ್ತದೆ.
ಸೌಂದರ್ಯ ಹೆಚ್ಚಿಸುತ್ತೆ: ಮಹಿಳೆಯರು ತಮ್ಮ ಮುಖದ ಹೊಳಪನ್ನು ಹೆಚ್ಚಿಸಲು ಮತ್ತು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಅರಿಶಿನವನ್ನು ಬಳಸುತ್ತಾರೆ. ಹಸಿ ಅರಿಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಗುಣಗಳು ಆಂತರಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮ ಮತ್ತು ಕೂದಲನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿಸಲು ಸಹ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇದರ ಬಳಕೆಯು ಚರ್ಮದ ಸಮಸ್ಯೆಗಳಾದ ಕಲೆಗಳು, ಸುಕ್ಕುಗಳು ಮತ್ತು ಮೊಡವೆಗಳಿಂದ ಪರಿಹಾರವನ್ನು ನೀಡುತ್ತದೆ.
ಅಷ್ಟೇ ಅಲ್ಲ, ಇದು ರಿಂಗ್‌ವರ್ಮ್, ತುರಿಕೆ ಮತ್ತು ಕೆಲವು ಸಾಮಾನ್ಯ ಮತ್ತು ಗಂಭೀರ ಚರ್ಮದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಅರಿಶಿನವನ್ನು ಪ್ರತಿಯೊಂದು ರೂಪದಲ್ಲೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದ್ದರೂ, ಒಣಗಿದ ಸಾಮಾನ್ಯ ಅರಿಶಿನಕ್ಕೆ ಹೋಲಿಸಿದರೆ ಹಸಿ ಅರಿಶಿನ ಸೇವನೆಯು ಹೆಚ್ಚು ಪ್ರಯೋಜನಕಾರಿಯಾಗಿದೆ. ಶುಂಠಿಯಂತೆ ಕಾಣುವ ಹಸಿ ಅರಿಶಿನವು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ.
ಆಯುರ್ವೇದದಲ್ಲಿ ಹಸಿ ಅರಿಶಿನದ ಪ್ರಯೋಜನಗಳೇನು?: ಭೋಪಾಲ್‌ನ ಆಯುರ್ವೇದ ವೈದ್ಯ ಡಾ.ರಾಜೇಶ್ ಶರ್ಮಾ ಮಾಯನಾಡಿ, ಋತುಮಾನದ ಅಗತ್ಯಕ್ಕೆ ಅನುಗುಣವಾಗಿ ನಮ್ಮ ಪ್ರಕೃತಿಯು ನಮಗೆ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಒದಗಿಸುತ್ತದೆ. ಅರಿಶಿನವು ಎಲ್ಲಾ ರೀತಿಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ದೇಹದ ಉತ್ಕರ್ಷಣ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತೆ: ಅರಿಶಿನವು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಅಷ್ಟೇ ಅಲ್ಲ, ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅರಿಶಿನವನ್ನು ಸಹ ಬಳಸಲಾಗುತ್ತದೆ. ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಅರಿಶಿನವು ದೇಹದ ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.