ಈಗೆಲ್ಲಾ ಡಿವೋರ್ಸ್ ಅನ್ನೋದು ಒಂದು ರೀತಿಯ ಟ್ರೆಂಡ್ ಆಗ್ಬಿಟ್ಟಿದೆ ಅನ್ನುಸ್ತಾ ಇದೆ. ಯಾಕಂದ್ರೆ ಸಣ್ಣ ಸಣ್ಣ ವಿಷಯಕ್ಕೂ ದಂಪತಿಗಳು ಕೋರ್ಟ್ ಮೆಟ್ಟಲೇರೋದು ಡಿವೋರ್ಸ್ ಅಪ್ಲೆ ಮಾಡೋದು ಸಾಮಾನ್ಯ ಆಗ್ಬಿಟ್ಟಿದೆ ನೋಡಿ.. ಅದೇ ರೀತಿಯ ಒಂದು ಘಟನೆಯೊಂದು ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್)ನಲ್ಲಿ ಸಂಭವಿಸಿದೆ. ಪತ್ನಿಯ ಅಸಲೀ ಮುಖವಾಡ ಬಯಲಾಗಿದ್ದೆ ಧಂಗಾದ ಪತಿ ತಡ ಮಾಡದೇ ವಿಚ್ಚೇದನ ನೀಡಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಗಂಡಸರು ಹುಡ್ಗೀರ ಅಂದಕ್ಕೆ ಮಾರು ಹೋಗ್ತಾರೆ ನಿಜ. ಎಲ್ರೂ ಸಾಮಾನ್ಯವಾಗಿ ಹುಡ್ಗೀರ ಯಾವ ಲಕ್ಷಣ ನಿಮ್ಗೆ ಇಷ್ಟ ಅಂದ್ರೆ ಮೊದ್ಲಿಗೆ ಹೇಳೋದೆ ಆಕೆಯ ಅಂದ ಅಂತ ಆಮೇಲೆ ಬೇರೆ ವಿಶ್ಯದ್ ಬಗ್ಗೆ ಮಾತ್ನಾಡ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಮದುವೇಗೂ ಮುಂಚೆ ತನ್ನ ಪತ್ನಿಯ ಸೌಂದರ್ಯಕ್ಕೆ ಪಲ್ಟಿ ಹೊಡ್ದು.. ಮದ್ವೆ ಆದ್ರೆ ಇವ್ಳನ್ನೇ ಆಗೋದು ಅಂತ ಶಪತ ಮಾಡಿದ್ದಾನೆ ನೋಡಿ..! ಮುಂದೆ ನಡೀತು ನೋಡಿ ದೊಡ್ಡ ಟ್ರಾಜಿಡಿ..! 28 ವರ್ಷದ ತನ್ನ ಪತ್ನಿಯನ್ನು ಶರ್ಜಾದ ಅಲ್-ಮಂಜರ್ ಬೀಚ್‍ನಲ್ಲಿ ಸ್ವಿಮ್ಮಿಂಗ್ ಮಾಡ್ತಾ ಇದ್ದ ವೇಳೆ ತನ್ನ ಪತ್ನಿಯ ನಿಜವಾದ ಅವತಾರ ನೋಡಿ ಒಂದು ಕ್ಷಣ ಮೂಕ ವಿಸ್ಮಿತನಾಗಿದ್ದಾನೆ.. ಆಕೆಯ ನಿಜವಾದ ಮುಖ ಬಯಲಾದ ಕೂಡಲೇ ಈತನಿಗೆ ಶಾಕ್ ಆಗ್ಬಿಟ್ಟಿದೆ..! ತನ್ನ ಪತ್ನಿ ದಿನವಿಡೀ ಸೌಂದರ್ಯವತಿಯಾಗಿ ಕಂಗೊಳಿಸ್ತಾ ಇದ್ಲು ಈಗ ಹೇಗೆ ಈ ರೀತಿಯ ಕುರೂಪಿ ಆದ್ಲು ಅಂತ ಉತ್ತರ ಹುಡುಕ್ಕೊಂಡ್ ಹೋದಾಗ ಪತಿರಾಯನಿಗೆ ತನ್ನ ಪತ್ನಿ ಹುಟ್ಟುತ್ತಲೇ ಕುರೂಪಿಯಾಗಿದ್ದು, ತಾನು ಸೌಂದರ್ಯವತಿಯಾಗಿ ಕಂಗೊಳಿಸಬೇಕು ಅಂತಾನೆ ಹಲವಾರು ಬಾರಿ ಚಿಕಿತ್ಸೆ ಮೊರೆ ಹೋಗಿದ್ದಾಳಂತೆ.. ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಗೂ ಆಗಾಗ ನಡೀತಾ ಇರುತಂತೆ.. ಅಷ್ಟೇ ಅಲ್ಲದೇ ಆಕೆಯ ಕಣ್ಣಿನ ರೆಪ್ಪೆಗಳೂ ಕೂಡ ನಕಲಿಯಾಗಿದ್ವಂತೆ..! ಈ ಸತ್ಯಾಂಶ ಬಯಲಾದದ್ದು ಆಕೆ ಬೀಚ್‍ನಲ್ಲಿ ಮಿಂದೆದ್ದು ಬಂದಾಗ. ವರದಿಯೊಂದು ಹೇಳುವಂತೆ ಇವರಿಬ್ಬರ ಮದುವೆಗೂ ಮುಂಚಿತವಾಗಿ ಆಕೆ ತನ್ನ ನಿಜವಾದ ಸೌಂದರ್ಯದ ಕುರಿತು ತನ್ನ ಪತಿಯೊಂದಿಗೆ ಹೇಳಿಕೊಂಡಿರುವುದಾಗಿ ಮನಶಾಸ್ತ್ರಜ್ಞ ಡಾ. ಅಬ್ದುಲ್ ಅಜೀಜ್ ಅಸಫ್ ಹೇಳಿದ್ದಾರೆ. ನಕಲಿ ಸೌಂದರ್ಯಕ್ಕೆ ಮಾರುಹೋಗಿ ಯಾವ ಮಾತನ್ನು ಆಲಿಸಲು ತಯಾರಿಲ್ಲದ ಈತನಿಗೆ ಇದೀಗ ಸತ್ಯಂಶ ಬಯಲಾಗಿ ಡಿವೋರ್ಸ್ ನೀಡಲು ಮುಂದಾಗಿದ್ದಾನೆ ಎಂದು ಹೇಳಲಾಗ್ತಾ ಇದೆ.
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!