ಡೈರೆಕ್ಟರ್, ಪ್ರೊಡ್ಯೂಸರ್,ಆಕ್ಟರ್,ಚಿತ್ರಕಥೆ ಬರಹಗಾರರು ಆಗಿದ್ದಂತಹ ಎ. ಟಿ ರಘು ನಿಧನರಾಗಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಹಾಗೂ ಕೊಡವ ಭಾಷೆ ಗಳಲ್ಲಿ ಕೆಲಸ ಮಾಡಿದ್ದರು. ಇಂದು ರಾತ್ರಿ 10 ಗಂಟೆಗೆ ಆರ್ ಟಿ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಇಷ್ಟು ದಿನಗಳ ಕಾಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಸುಮಾರು *55* ವರ್ಷಗಳ ಸುದೀರ್ಘ ಕನ್ನಡ ಚಲನಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಇವರು ಬರಹಗಾರನಾಗಿ, ಸಹನಿರ್ದೇಶಕನಾಗಿ, ಮುಖ್ಯಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ನಟನಾಗಿ, ಸಾಹಸ ಚಿತ್ರಗಳ ಸರದಾರನಾಗಿ
ಅತೀ ಹೆಚ್ಚು ಸುಮಾರು 27 ರೆಬೆಲ್ ಸ್ಟಾರ್ ಅಂಬರೀಷ್ ರವರ ಚಿತ್ರಗಳನ್ನೇ ನಿರ್ದೇಶಸಿದ ಅಪ್ರತಿಮ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿದ್ದರು.
ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್ ನಲ್ಲಿ ಡಯಲಿಸಿಸ್ ನಡೀತಾ ಇತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.