ರಾಜಧಾನಿ ಬೆಂಗಳೂರಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ ಹಚ್ಚಿದ ಖಾಕಿ – ಓರ್ವ ಅರೆಸ್ಟ್!
ಬೆಂಗಳೂರು:- ಬೆಂಗಳೂರಿನ ಸಂಪಿಗೆಹಳ್ಳಿ ಬಳಿಯಲ್ಲಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದ್ದು, ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಹೌದು, ಇಲ್ಲಿನ ಬೆಳ್ಳಳ್ಳಿಯ ಅಬ್ದುಲ್ ರೆಹಮಾನ್ ಮನೆಯಲ್ಲಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದೆ. ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಾಂಬ್ ಮಾದರಿಯ ಸ್ಫೋಟಕವನ್ನು ವಶಕ್ಕೆ ಪಡೆದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಅಬ್ದುಲ್ ರೆಹಮಾನ್ ವಿಚಾರಣೆ ವೇಳೆ, ಎಲ್ಲಿಯೋ ಸಿಕ್ಕಿತ್ತು. ಬಾಂಬ್ ಮಾದರಿಯ ವಸ್ತು ರಸ್ತೆಯಲ್ಲಿ ಸಿಕ್ಕಿತ್ತು ಎಂದು ಹೇಳಿದ್ದಾನೆ