IPL 2025: ಇಂದು ಚೆನ್ನೈ, ಆರ್‌ಸಿಬಿ ನಡುವೆ ಬಿಗ್ ಫೈಟ್: ಇಲ್ಲಿದೆ ಪ್ಲೇಯಿಂಗ್ 11
ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ಟೀಮ್ ಕಣಕ್ಕಿಳಿಯಲಿದೆ. ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೆಣಸಾಡಲಿದೆ.
ಇನ್ನು, ಆರ್ಸಿಬಿ ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಓಪನಿಂಗ್ ಮಾಡಲಿದ್ದಾರೆ. ಕ್ಯಾಪ್ಟನ್ ರಜತ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಬಿಗ್ ಹಿಟ್ಟರ್ಸ್ ಆದ ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಆಡಲಿದ್ದಾರೆ. ಇಂಡಿಯನ್ ಯಂಗ್ ಬ್ಯಾಟರ್ ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡವನ್ನು ಲೀಡ್ ಮಾಡಬಹುದು. ಇವರಿಗೆ ಜೋಶ್ ಹೇಜಲ್ವುಡ್ ಸಾಥ್ ನೀಡಬಹುದು. ಇವರಿಗೆ ಯಶ್ ದಯಾಳ್ ಮತ್ತು ರಸಿಕ್ ಸಲಾಂ ಬೆಂಬಲ ಇದೆ. ಆಲ್‌ರೌಂಡರ್ ಕೃನಾಲ್ ಪಾಂಡ್ಯಾ ಜತೆಗೆ ಸುಯಾಶ್ ಶರ್ಮಾ ಸ್ಪಿನ್ ದಾಳಿ ನಡೆಸಲಿದ್ದಾರೆ.
ಉಭಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ, ರವೀಂದ್ರ ಜಡೇಜ, ಶಿವಂ ದುಬೆ, ಮಥಿಶಾ ಪತಿರಾನ, ನೂರ್ ಅಹ್ಮದ್, ರವಿಚಂದ್ರನ್ ಅಶ್ವಿನ್, ಡೆವೊನ್ ಕಾನ್ವೇ, ಸೈಯದ್ ಖಲೀಲ್ ಅಹ್ಮದ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಸ್ಯಾಮ್ ಕರನ್, ಶೇಖ್ ರಶೀದ್, ಅಂಶುಲ್ ಕಾಂಬೋಜ್, ಮುಖೇಶ್ ಚೌಧರಿ, ದೀಪಕ್ ಹೂಡಾ, ಗುರ್ಜನ್‌ಪ್ರೀತ್ ಸಿಂಗ್, ನಾಥನ್ ಎಲ್ಲಿಸ್, ಜೇಮೀ ಓವರ್ಟನ್, ಕಮಲೇಶ್ ನಾಗರ್ಕೋಟಿ, ರಾಮಕೃಷ್ಣನ್ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ಸಲಾಂ, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕಲ್, ಸ್ವಸ್ತಿಕ್ ಚಿಖರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.