ರಾಜ್ಯ ಸರ್ಕಾರ ಸತ್ತು ಹೋಗಿದೆ. ಪೋಸ್ಟ್ ಮಾಟಂ ಮಾಡೋದು ಮಾತ್ರ ಉಳಿದಿದೆ: ಜಗದೀಶ್ ಶೆಟ್ಟರ್ ವ್ಯಂಗ್ಯ
ಹುಬ್ಬಳ್ಳಿ: ರಾಜ್ಯ ಸರ್ಕಾರ ಸತ್ತು ಹೋಗಿದೆ. ಪೋಸ್ಟ್ ಮಾಟಂ ಮಾಡೋದು ಮಾತ್ರ ಉಳಿದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ರಾಜ್ಯ ಸರ್ಕಾರ ಸತ್ತು ಹೋಗಿದೆ. ಪೋಸ್ಟ್ ಮಾಟಂ ಮಾಡೋದು ಮಾತ್ರ ಉಳಿದಿದೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದೆ.
ಆಡಳಿತ ನಿಯಂತ್ರಣ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ಹಾಲಿನ ದರಕ್ಕಾಗಿ ಜನ ಸಾಮಾನ್ಯರಿಗೆ ಬರೆ ಹಾಕುವ ಬದಲು ನಿಮ್ಮ ಖಜಾನೆಯಿಂದಲೇ ನೇರವಾಗಿ ಸಂದಾಯ ಮಾಡಲಿ. ಜನಸಾಮಾನ್ಯರಿಗೆ ತೊಂದರೆ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು, ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರವಾಗಿ, ದೇವೆಗೌಡರು ಹಿರಿಯ ರಾಜಕಾರಣಿ ಅವರ ಭೇಟಿಯಲ್ಲಿ ಏನೂ ವಿಶೇಷ ಇಲ್ಲ ಎಂದರು.