ಮೆಂಟೈನನ್ಸ್ ಕೇಸ್ ಹಾಕಿದ್ದಕ್ಕೆ ಕಿರಿಕ್: ಪತ್ನಿ ಹಾಗೂ ಪತ್ನಿ ತಂಗಿ ಮೇಲೆ ಮಚ್ಚಿನಿಂದ ಅಟ್ಯಾಕ್!

Date:

ಮೆಂಟೈನನ್ಸ್ ಕೇಸ್ ಹಾಕಿದ್ದಕ್ಕೆ ಕಿರಿಕ್: ಪತ್ನಿ ಹಾಗೂ ಪತ್ನಿ ತಂಗಿ ಮೇಲೆ ಮಚ್ಚಿನಿಂದ ಅಟ್ಯಾಕ್!

ರಾಯಚೂರು: ಗಂಡನೊಬ್ಬ ಪತ್ನಿ ಮೆಂಟೈನನ್ಸ್ ಕೇಸ್ ಹಾಕಿದ್ದಕ್ಕೆ ಕಿರಿಕ್ ತೆಗೆದು ಪತ್ನಿ ಹಾಗೂ ಪತ್ನಿ ತಂಗಿ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿದ ಘಟನೆ ರಾಯಚೂರು ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ಪದ್ಮಾವತಿ (33) ಹಾಗೂ ಆಕೆ ತಂಗಿ ಭೂದೇವಿ ( 23 ) ಮೇಲೆ ಹಲ್ಲೆ ಮಾಡಲಾಗಿದ್ದು, ಪದ್ಮಾವತಿ ಪತಿ ತಿಮ್ಮಪ್ಪ ಯಾದವ್ ಅನ್ನೋನಿಂದ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ.
ಭೂದೇವಿಗೆ ಮದುವೆಗೆ ಇನ್ನೂ ಒಂದೇ ತಿಂಗಳು ಬಾಕಿ ಇತ್ತು. ಪದ್ಮಾವತಿ ಪತಿ ತಿಮ್ಮಪ್ಪ ಮಟ್ಕಾ ಬುಕ್ಕಿಯಾಗಿದ್ದ. ಪತ್ನಿ ಜೊತೆಗೆ ಜಗಳವಾಡಿ ಎರಡನೇ ಮದುವೆ ಮಾಡಿಕೊಂಡಿರೊ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕೋರ್ಟ್ ನಲ್ಲಿ ಮೆಂಟೈನ್ಸ್ ಕೇಸ್ ಹಾಗೂ ಜಮೀನಿನಲ್ಲಿ ಪತ್ನಿ ಪಾಲು ಕೇಳಿದ್ದಳು.
ಕೋರ್ಟ್ ಆದೇಶದಂತೆ ಮೆಂಟೈನನ್ಸ್ ಹಣ ನೀಡದೇ ತಿಮ್ಮಪ್ಪ ಜೈಲುಪಾಲಾಗಿದ್ದರು. ಬಳಿಕ 50 ಸಾವಿರ ಹಣ ನೀಡಿ ಪತಿ ತಿಮ್ಮಪ್ಪ ಸೆಟಲ್ಮೆಂಟ್
ಮಾಡಿಕೊಂಡಿದ್ದ. ಈಗ ಏಕಾಏಕಿ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಕ್ಕನನ್ನ ಕಾಪಾಡಲು ಹೋಗಿದ್ದ ಪದ್ಮಾವತಿ ತಂಗಿ ಭೂದೇವಿ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ.
ಸದ್ಯ ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರ,ರಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಶೋಧಕಾರ್ಯ ನಡೆದಿದೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...