ಈ ಸರ್ಕಾರ ಜನರಿಗೆ, ಮತದಾರರಿಗೆ ಶಾಪ ಕೊಡುವ ಕೆಲಸ ಮಾಡಿದೆ: ಬಿವೈ ವಿಜಯೇಂದ್ರ
ಬೆಂಗಳೂರು: ಈ ಸರ್ಕಾರ ಜನರಿಗೆ, ಮತದಾರರಿಗೆ ಶಾಪ ಕೊಡುವ ಕೆಲಸ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನೋಂದಣಿ-ಮುದ್ರಾಂಕ ಶುಲ್ಕ ಜಾಸ್ತಿ ಆಗಿದೆ.
ಪ್ರೊಫೆಷನಲ್ ಟ್ಯಾಕ್ಸ್ ಜಾಸ್ತಿ ಮಾಡಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ಆಗಿದೆ. ಬೀಜಗಳ ಬೆಲೆ ಜಾಸ್ತಿ ಮಾಡಿದ್ದಾರೆ. ನೀರಿನ ದರ ಜಾಸ್ತಿ ಮಾಡಿದ್ದಾರೆ. ಈ ಸರ್ಕಾರ ಜನರಿಗೆ, ಮತದಾರರಿಗೆ ಶಾಪ ಕೊಡುವ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಏ.2ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ಹಾಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಭಾಗಿಯಾಗುತ್ತಾರೆ. ಏ.2ರಂದು ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ಏ.5ರಂದು ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಎಲ್ಲಾ ಜಿಲ್ಲೆಗಳಲ್ಲಿ ರಸ್ತೆಗೆ ಇಳಿದು ಹೋರಾಟ ಮಾಡಲಿದೆ ಎಂದರು.