ಬೀದಿ ಕಾಮುಕರ ಕಿರುಕುಳ: ಯುವತಿ ಖಾಸಗಿ ಭಾಗ ಮುಟ್ಟಿ ಅಸಭ್ಯ ವರ್ತನೆ!

Date:

ಬೆಂಗಳೂರು:- ಇವರಿಗೆ ಯಾವ ಪೊಲೀಸ್ ಭಯವೂ ಇಲ್ಲ, ಲಾ ಅಂಡ್ ಆರ್ಡರ್ ಗೆ ಕ್ಯಾರೆನೂ ಅನ್ನ ಅಂತಹ ಮೊಂಡು ಬಿದ್ದಿರುವ ಬೀದಿ ಕಾಮುಕರು. ಹೆಣ್ಣು ಮಕ್ಕಳು ಹೊರಗೆ ಬರೋದನ್ನೇ ಕಾಯುವ ಈ ನೀಚರಿಗೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಅದರಂತೆ ನಗರದಲ್ಲಿ ಯುವತಿಯೊಬ್ಬಳು ಬೀದಿ ಕಾಮುಕರ ಕಿರುಕುಳಕ್ಕೆ ಒಳಗಾಗಿದ್ದಾರೆ. ಹೆಣ್ಣೂರು ಮುಖ್ಯ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಇಬ್ಬರು ಅಪರಿಚಿತರು ಯುವತಿಯ ಸ್ಕೂಟರ್ ಅನ್ನು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಯು, ತನ್ನ ಸ್ನೇಹಿತರ ಮನೆಯಿಂದ ಬೆಳಗ್ಗಿನ ಜಾವ 4.30 ರ ವೇಳೆ ಸ್ಕೂಟರ್​ನಲ್ಲಿ ಹೊರಟ್ಟಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಕೂಟರ್ ಹಿಂಬಾಲಿಸಿಕೊಂಡು ಬಂದಿದ್ದು, ಅಡ್ಡ ಹಾಕಿ ಖಾಸಗಿ ಭಾಗ ಟಚ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಕಾಮುಕರನ್ನ ಹಿಡಿಯಲು ಬಂದ ಸಾರ್ವಜನಿಕರಿಗೆ ಚಾಕು ತೋರಿಸಿ ಪರಾರಿಯಾಗಿದ್ದಾರೆ.

ಸದ್ಯ ಬಾಣಸವಾಡಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...