ನಿಯಮ ಉಲ್ಲಂಘನೆ: ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಶಿಕ್ಷೆ ಪ್ರಕಟಿಸಿದ BCCI!

Date:

ಚೆನ್ನೈ ವಿರುದ್ಧ IPL ಪಂದ್ಯದಲ್ಲಿ ಪಂಜಾಬ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ನಿಯಮ ಉಲ್ಲಂಘನೆ ಮಾಡಿದ್ದು, ಇದೀಗ BCCI ಅವರಿಗೆ ಶಿಕ್ಷೆ ವಿಧಿಸಿದೆ.

ನಿಯಮದ ಪ್ರಕಾರ ಪಂಜಾಬ್ ಆಲ್​ರೌಂಡರ್ ಗ್ಲೇನ್ ಮ್ಯಾಕ್ಸ್​ವೆಲ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1ರಂತೆ ತಪ್ಪು ಮಾಡಿರುವುದು ಕಂಡುಬಂದಿದೆ. ಈ ತಪ್ಪಿನಿಂದಾಗಿ ಪಂದ್ಯದ ಶುಲ್ಕದಲ್ಲಿ ಶೇಕಡಾ 25ರಷ್ಟು ಮ್ಯಾಕ್ಸ್​ವೆಲ್​ಗೆ ದಂಡ ಹಾಕಲಾಗಿದೆ. ಇದರ ಜೊತೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಕ್ಸ್‌ವೆಲ್​ಗೆ ದಂಡ ವಿಧಿಸಲಾಗಿದೆ.

ಐಪಿಎಲ್ ಪಂದ್ಯ ಆಡುವಾಗ ಯಾವುದೇ ಆಟಗಾರ ಅಸಭ್ಯ ವರ್ತನೆ, ಕ್ರಿಕೆಟ್ ಆಡುವ ವಸ್ತುಗಳನ್ನ ದುರುಪಯೋಗ ಮಾಡುವುದು, ಇತರೆ ಆಟಗಾರರನ್ನು ಹೀಯಾಳಿಸುವುದು, ಜಾಹೀರಾತು ಫಲಕಗಳನ್ನು ಒಡೆಯುವುದು, ಡ್ರೆಸ್ಸಿಂಗ್ ರೂಮ್​ನಲ್ಲಿ ಅಸಭ್ಯ ವರ್ತನೆ, ಗ್ಲಾಸ್ ಒಡೆಯುವುದು, ಔಟ್ ಆದರೆ ಬ್ಯಾಟ್​ನಿಂದ ಕೋಪ ತೀರಿಸಿಕೊಳ್ಳುವುದು ಇಂತಹ ವರ್ತನೆ ತೋರಿದರೆ ದಂಡ ವಿಧಿಸಲಾಗುತ್ತದೆ.

ಚೆನ್ನೈ ವಿರುದ್ಧ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ್ದ ಗ್ಲೇನ್ ಮ್ಯಾಕ್ಸ್​ವೆಲ್​ ಕೇವಲ ಒಂದು ರನ್​​ಗೆ ಆರ್​ ಅಶ್ವಿನ್​ ಬೌಲಿಂಗ್​ನಲ್ಲಿ ಔಟ್ ಆಗಿದ್ದರು. ಇದೇ ಪಂದ್ಯದಲ್ಲಿ 2 ಓವರ್​ಗಳನ್ನು ಮಾಡಿ ಕೇವಲ 11 ರನ್ ನೀಡಿ ಒಂದು ವಿಕೆಟ್​ ಕೂಡ ಮ್ಯಾಕ್ಸಿ ಪಡೆದಿದ್ದರು. ಆದರೆ ಪಂದ್ಯದ ವೇಳೆ ಅವರು ಮಾಡಿರುವ ವರ್ತನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮ್ಯಾಕ್ಸ್​ವೆಲ್​ಗೆ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಿದೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...